ಟೋಕಿಯೋ : 20ನೇ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸಿಂಗಲ್ಸ್ ಮತ್ತೊಂದು ಸೋಲು ಕಂಡಿದ್ದಾರೆ. ಈ ಮೂಲಕ ಕಂಚಿನ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಳಿಸಿಕೊಂಡಿದ್ದಾರೆ.
ನಿನ್ನೆ ಸೆಮಿಫೈನಲ್ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಸೋಲು ಕಂಡಿದ್ದ ಅವರು, ಇಂದು ಕಂಚಿನ ಪದಕಕ್ಕಾಗಿ ಎದುರಾಳಿ ಕ್ಯಾರೆನೊ ಬುಸ್ಟಾ ವಿರುದ್ಧ ನಡೆದ ಪಂದ್ಯದಲ್ಲೂ ಸೋಲು ಕಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ಸ್ಪೇನ್ನ ಕ್ಯಾರೆನೊ ಬುಸ್ಟಾ ವಿರುದ್ಧ 6-4, 6-7, 6-3 ಅಂತರದಿಂದ ಸೋಲು ಕಂಡಿದ್ದು, ಪದಕ ವಂಚಿತರಾಗಿ ಒಲಿಂಪಿಕ್ಸ್ನಿಂದ ಹೊರ ಬಿದ್ದಿದ್ದಾರೆ. ಈ ಮೂಲಕ ಪದಕಕ್ಕೆ ಮುತ್ತಿಕ್ಕುವ ಅವರ ಕನಸು ಭಗ್ನಗೊಂಡಿದೆ.
ಇದನ್ನೂ ಓದಿರಿ: 'ಗೋಲ್ಡನ್ ಸ್ಲ್ಯಾಮ್' ಕನಸು ಭಗ್ನ: ಸೆಮಿಫೈನಲ್ನಲ್ಲಿ ಜೊಕೊವಿಚ್‌ಗೆ ಅಚ್ಚರಿಯ ಸೋಲು
34 ವರ್ಷದ ಜೊಕೊವಿಚ್ ಅಸ್ಟ್ರೇಲಿಯಾ ಓಪನ್, ಅಮೆರಿಕ, ಫ್ರೆಂಚ್ ಹಾಗೂ ವಿಂಬಲ್ಡನ್ ಗೆದ್ದು, ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದರು. ಆದರೆ, ಟೆನಿಸ್ ಸಿಂಗಲ್ಸ್ ಸೆಮಿಫೈನಲ್ ಹಾಗೂ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದ್ದು, ಟೆನಿಸ್ ದಿಗ್ಗಜನ ಕೆರಿಯರ್ ಮುಗಿಯಿತಾ ಎಂಬ ಮಾತು ಕೇಳಿ ಬರಲು ಶುರುವಾಗಿವೆ.