ಟೋಕಿಯೋ: ಒಲಿಂಪಿಕ್ಸ್ನಲ್ಲಿ ಇಂದು ಭಾರತೀಯ ಕ್ರೀಡಾಪಟುಗಳು ಅನೇಕ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. ಆದರೆ ಸ್ಪೇನ್ ವಿರುದ್ಧ ನಡೆದ ಹಾಕಿಯಲ್ಲಿ ಭಾರತದ ಪುರುಷರ ತಂಡ ಭರ್ಜರಿ ಗೆಲುವು ದಾಖಲಿಸಿದ್ದು, ಬಾಕ್ಸಿಂಗ್ನಲ್ಲಿ ಲವ್ಲಿನಾ ಬೊರ್ಗೊಹೈನ್ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ನಾಳೆ ಪ್ರಮುಖವಾಗಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಎರಡನೇ ಪಂದ್ಯದಲ್ಲಿ ಹಾಂಕಾಂಗ್ ಆಟಗಾರ್ತಿ ವಿರುದ್ಧ ಸೆಣಸಲಿದ್ದಾರೆ.
-
India at #Tokyo2020
— SAIMedia (@Media_SAI) July 27, 2021 " class="align-text-top noRightClick twitterSection" data="
Take a look at @tokyo2020 events scheduled for 28 July.
Catch #TeamIndia in action on @ddsportschannel and send in your #Cheer4India messages below. pic.twitter.com/JFsq7ThIcY
">India at #Tokyo2020
— SAIMedia (@Media_SAI) July 27, 2021
Take a look at @tokyo2020 events scheduled for 28 July.
Catch #TeamIndia in action on @ddsportschannel and send in your #Cheer4India messages below. pic.twitter.com/JFsq7ThIcYIndia at #Tokyo2020
— SAIMedia (@Media_SAI) July 27, 2021
Take a look at @tokyo2020 events scheduled for 28 July.
Catch #TeamIndia in action on @ddsportschannel and send in your #Cheer4India messages below. pic.twitter.com/JFsq7ThIcY
ಭಾರತ ನಾಳೆ ಈ ಸ್ಪರ್ಧೆಗಳಲ್ಲಿ ಮುಖಾಮುಖಿ:
ಹಾಕಿ(ಮಹಿಳಾ ತಂಡ)
ಬೆಳಗ್ಗೆ 6:30ಕ್ಕೆ ಭಾರತ-ಗ್ರೇಟ್ ಬ್ರಿಟನ್ ನಡುವೆ ಫೈಟ್ (ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ)
ಬ್ಯಾಡ್ಮಿಂಟನ್
ಬೆಳಗ್ಗೆ 7:30ಕ್ಕೆ: ಸಿಂಗಲ್ಸ್ನಲ್ಲಿ ಪಿ.ವಿ ಸಿಂಧು ಹಾಗೂ ಹಾಂಕಾಂಗ್ ಆಟಗಾರ್ತಿ ನಡುವೆ ಹಣಾಹಣಿ (ಮೊದಲ ಪಂದ್ಯ ಗೆದ್ದಿರುವ ಸಿಂಧು)
ಮಧ್ಯಾಹ್ನ 2:30ಕ್ಕೆ: ಸಿಂಗಲ್ಸ್ನಲ್ಲಿ ಸಾಯಿ ಪ್ರಣೀತ್ vs ನೆದರ್ಲ್ಯಾಂಡ್ನ ಮಾರ್ಕ್ ಸೆಣಸು
ಅರ್ಚರಿ(ಬಿಲ್ಲುಗಾರಿಕೆ)
ಬೆಳಗ್ಗೆ 7:31ಕ್ಕೆ: ಸಿಂಗಲ್ಸ್ನಲ್ಲಿ ತರುಣದೀಪ್ ರೈ ಹಾಗೂ ಉಕ್ರೇನ್ ಮುಖಾಮುಖಿ
ಮಧ್ಯಾಹ್ನ 12:30 ಪುರುಷರ ಸಿಂಗಲ್ಸ್ನಲ್ಲಿ ಪ್ರವೀಣ್ ಜಾಧವ್ vs ಗೊಲ್ಸಾನ್ ಆಟಗಾರ
2:14ಕ್ಕೆ ಮಹಿಳಾ ವಿಭಾಗದಲ್ಲಿ ದೀಪಿಕಾ ಕುಮಾರಿ vs ಬೂತಾನ್ನ ಕರ್ಮಾ
ಬಾಕ್ಸಿಂಗ್
ಮಧ್ಯಾಹ್ನ 2:30ಕ್ಕೆ: ಮಹಿಳಾ ವಿಭಾಗ(69-75 ಕೆಜಿ) ಪೂಜಾ ರಾಣಿ vs ಅಲ್ಜೀರಿಯಾ ಆಟಗಾರ್ತಿ
ಇನ್ನೊಂದು ಪಂದ್ಯ ಗೆದ್ದರೆ ಭಾರತಕ್ಕೆ ಪದಕ ಫಿಕ್ಸ್
ಇದೇ ಮೊದಲ ಸಲ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿರುವ ಲವ್ಲಿನಾ, ಮುಂದಿನ ಸ್ಪರ್ಧೆಯಲ್ಲಿ ಚೀನಾದ ತೈಪೆಯ ನಿಯೆನ್ ವಿರುದ್ಧ ಬಾಕ್ಸಿಂಗ್ನಲ್ಲಿ ಸೆಣಸಾಟ ನಡೆಸಲಿದ್ದಾರೆ. ಇಲ್ಲಿ ಗೆದ್ದರೆ ಸೆಮಿಫೈನಲ್ಗೆ ಲಗ್ಗೆ ಹಾಕಲಿದ್ದಾರೆ. ಒಂದು ವೇಳೆ ಅವರು ಸೆಮೀಸ್ಗೆ ಲಗ್ಗೆ ಹಾಕಿದರೆ ಸಾಕು ಪದಕ ಸಿಗುವುದು ಪಕ್ಕಾ.