ETV Bharat / sports

ಪದಕವಿಲ್ಲದೇ 4ನೇ ದಿನದ ಒಲಿಂಪಿಕ್ಸ್‌ ಮುಕ್ತಾಯ: ನಾಳಿನ ಸ್ಪರ್ಧೆ, ಭಾರತೀಯ ಸ್ಪರ್ಧಿಗಳ ವಿವರ, ಸಮಯ.. - ಟೋಕಿಯೋ ಒಲಿಂಪಿಕ್ಸ್​ 5ನೇ ದಿನ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ನಾಳೆ ಕೆಲವು ಪ್ರಮುಖ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಿದ್ದು, ಹಾಕಿ ತಂಡ ಬಲಿಷ್ಠ ಸ್ಪೇನ್ ವಿರುದ್ಧ ಸೆಣಸಾಟ ನಡೆಸಲಿದೆ.

Tokyo Olympics
Tokyo Olympics
author img

By

Published : Jul 26, 2021, 9:11 PM IST

ಟೋಕಿಯೋ​: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ನೀರಸ ಪ್ರದರ್ಶನ ಮುಂದುವರೆದಿದ್ದು, ನಾಲ್ಕನೇ ದಿನವೂ ಯಾವುದೇ ಪದಕವಿಲ್ಲದೇ ದಿನ ಮುಗಿದಿದೆ.

ಪ್ರಮುಖವಾಗಿ ಬಾಕ್ಸಿಂಗ್​ನಲ್ಲಿ ಆಶಿಶ್​ ಕುಮಾರ್, ಟೇಬಲ್​ ಟೆನಿಸ್​ನಲ್ಲಿ ಮಣಿಕಾ, ಈಜು ಸ್ಪರ್ಧೆಯಲ್ಲಿ ಸಜನ್​ ಪ್ರಕಾಶ್​ ಹಾಗೂ ಬ್ಯಾಡ್ಮಿಂಟನ್​ನಲ್ಲಿ ಚಿರಾಗ್​-ಸಾತ್ವಿಕ್​​, ಫೆನ್ಸಿಂಗ್​ನಲ್ಲಿ ಭವಾನಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದರು.

ನಾಳೆ ಭಾರತೀಯ ಅಥ್ಲೀಟ್ಸ್​ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದು, ಸಂಪೂರ್ಣ ವಿವರ ಇಂತಿದೆ.

ಶೂಟಿಂಗ್​: ಬೆಳಗ್ಗೆ 5:30ಕ್ಕೆ

10 ಮೀಟರ್​​ ಏರ್​ ಪಿಸ್ತೂಲ್​​ ಮಿಶ್ರ ಕ್ವಾಲಿಫೈಯರ್‌ (ಮನು ಬಾಕರ್​/ಸೌರಭ್​ ಚೌಧರಿ, ಯಶಸ್ವಿನಿ ಸಿಂಗ್​/ ಅಭಿಷೇಕ್​ ವರ್ಮಾ

ಹಾಕಿ ಬೆಳಗ್ಗೆ 6:30ಕ್ಕೆ

ಭಾರತದ ಪುರುಷರ ತಂಡ ಪೂಲ್​ A (ಭಾರತ vs​ ಸ್ಪೇನ್​)

ಬ್ಯಾಡ್ಮಿಂಟನ್ ಬೆಳಗ್ಗೆ 8:30

ಪುರುಷರ ಡಬಲ್ಸ್​ ಗ್ರೂಪ್​

ಟೇಬಲ್​ ಟೆನ್ನಿಸ್​ ಬೆಳಗ್ಗೆ 8:30ಕ್ಕೆ

ಸಿಂಗಲ್ಸ್​ ಮೂರನೇ ರೌಂಡ್​ (ಶರತ್​​ ಕಮಲ್​ ವರ್ಸಸ್​ ಲಾಂಗ್​ ಮ)

ಇದನ್ನೂ ಓದಿ: Tokyo Olympics: 'ಬೆಳ್ಳಿ ಹುಡುಗಿ' ಮೀರಾಬಾಯಿ ಚನು ಈಗ ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ

ಭಾರತ ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ತನ್ನ ಅಭಿಯಾನವನ್ನು ಬಹುತೇಕ ಅಂತ್ಯಗೊಳಿಸಿದ್ದು, ಸದ್ಯ ಬ್ಯಾಡ್ಮಿಂಟನ್​, ಕುಸ್ತಿ, ಬಾಕ್ಸಿಂಗ್​ ಹಾಗೂ ಹಾಕಿಗಳಲ್ಲಿ ಮಾತ್ರ ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.