ಟೋಕಿಯೋ : ಶನಿವಾರ ಟೋಕಿಯೋ ಮೆಟ್ರೋಪಾಲಿಟನ್ ಜಿಮ್ನಾಷಿಯಂನಲ್ಲಿ ನಡೆದ ಟೇಬಲ್ ಟೆನ್ನಿಸ್ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಹಾಂಗ್ ಕಾಂಗ್‌ನ ಸಿಯು ಹ್ಯಾಂಗ್ ಲ್ಯಾಮ್ ವಿರುದ್ಧ ಭಾರತದ ಸತ್ಯನ್ ಜ್ಞಾನಶೇಖರನ್ ಸೋಲು ಅನುಭವಿಸಿದರು.
ಮೊದಲ ಸುತ್ತಿನಲ್ಲಿ ಸೋತ ಬಳಿಕ ಎರಡು, ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಎದುರಾಳಿ ವಿರುದ್ಧ ಸತ್ಯನ್ 11-7, 11-4 ಮತ್ತು 11-5 ರ ಅದ್ಬುತ ಪ್ರದರ್ಶನ ತೋರಿದರು. ಆದರೆ, ಐದು ಮತ್ತು ಆರನೇ ಸುತ್ತಿನಲ್ಲಿ 9-11 ಮತ್ತು 10-12 ಸೆಟ್ಗಳಿಂದ ಹಿನ್ನಡೆ ಅನುಭವಿಸಿದರು.
ಓದಿ : Tokyo Olympics : ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಸಾನಿಯಾ-ರೈನಾ ಜೋಡಿ
ಏಳನೇ ನಿರ್ಣಾಯಕ ಸುತ್ತಿನಲ್ಲಿ ಹಿಂದಿನಂತೆ ಆಡಲಾಗದೆ ಸತ್ಯನ್ 6-11 ಸೆಟ್ಗಳಿಂದ ಪರಾಭವಗೊಂಡರು.