ಟೋಕಿಯೋ : ಕೊರೊನಾ ಭೀತಿಯ ನಡುವೆಯೂ ವಿಶ್ವದಾದ್ಯಂತ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ಪದಕ ಗೆಲ್ಲಲ್ಲು ಹೋರಾಡುತ್ತಿದ್ದಾರೆ. ಈ ನಡುವೆ ಕಳೆದ 15 ದಿನಗಳಲ್ಲಿ ಯಾವ ಯಾವ ದೇಶ ಎಷ್ಟು ಪದಕಗಳನ್ನು ಗಳಿಸಿದೆ ಎಂಬುದರ ಮಾಹಿತಿ ಇಂತಿದೆ.
- " class="align-text-top noRightClick twitterSection" data="">
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಕ್ರೀಡಾಪಟುಗಳು ನಾನಾ ಸ್ಪರ್ಧೆಗಳಲ್ಲಿ ಭಾಗಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ಇದರ ಜೊತೆಗೆ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಹಿರಿಮೆ ತಂದು ಕೊಡುತ್ತಿದ್ದಾರೆ. 15ನೇ ದಿನದ ಅಂತ್ಯದ ನಂತರ ಯಾವ್ಯಾವ ದೇಶ ಎಷ್ಟು ಪದಕಗಳನ್ನು ಗೆದ್ದಿವೆ ಮತ್ತು ಭಾರತವು ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಲ್ಲಿದೆ.
ಓದಿ: ಟೋಕಿಯೋ ಒಲಿಂಪಿಕ್ಸ್: ನಾಳೆ ಕನ್ನಡತಿ ಆದಿತಿ, ರೈತನ ಮಗ ನೀರಜ್ ಚೋಪ್ರಾ ಫೈನಲ್ ಪಂದ್ಯ
ಈವರೆಗೆ ಚೀನಾ 36 ಚಿನ್ನ, 26 ಬೆಳ್ಳಿ ಮತ್ತು 17 ಕಂಚಿನ ಪದಕ ಕಬಳಿಸುವ ಮೂಲಕ ಪದಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಭಾರತ 2 ಬೆಳ್ಳಿ, 3 ಕಂಚಿನ ಪದಕ ಪಡೆಯುವ ಮೂಲಕ 66ನೇ ಸ್ಥಾನದಲ್ಲಿದೆ. ಇನ್ನು, ಅಮೆರಿಕ ಮತ್ತು ಜಪಾನ್ ಎರಡು ಹಾಗೂ ಮೂರನೇ ಸ್ಥಾನ ಪಡೆದಿವೆ.