ETV Bharat / sports

ಟೋಕಿಯೋ ಒಲಿಂಪಿಕ್ಸ್ 13ನೇ ದಿನ: ನೀರಜ್ ಚೋಪ್ರಾ ಮೇಲೆ ಪದಕದ ಭಾರಿ ನಿರೀಕ್ಷೆ

ವಿಶ್ವದ 4ನೇ ಶ್ರೇಯಾಂಕಿತನಾಗಿರುವ ಭಾರತದ 23 ವರ್ಷದ ಜಾವಲಿನ್​ ಥ್ರೋವರ್​ ನೀರಜ್​ ಚೋಪ್ರಾ ಒಲಿಂಪಿಕ್ಸ್​ನಲ್ಲಿ ಪೋಡಿಯಂ ಏರಲಿದ್ದಾರೆ ಎಂಬ ಭರವಸೆ ಕೋಟ್ಯಂತರ ಭಾರತೀಯರ ಮನದಲ್ಲಿದೆ. ಅವರು ಜಾವಲಿನ್ ಸ್ಟಾರ್​ ಜೋಹನೆಸ್​ ವೆಟ್ಟರ್​ ಇರುವ ಗುಂಪಿನಲ್ಲಿ ಅವಕಾಶ ಪಡೆದಿದ್ದಾರೆ. ಇವರ ಜೊತೆ ಭಾರತದ ಶಿವಪಾಲ್ ಸಿಂಗ್ ಕೂಡ ಪದಾರ್ಪಣೆ ಮಾಡಿದ್ದಾರೆ..

Tokyo Olympics, Day 13
ಟೋಕಿಯೋ ಒಲಿಂಪಿಕ್ಸ್​ 2020
author img

By

Published : Aug 3, 2021, 8:19 PM IST

ಟೋಕಿಯೊ : ಟೋಕಿಯೊ ಒಲಿಂಪಿಕ್ಸ್​ ಯಶಸ್ವಿಯಾಗಿ 12 ದಿನಗಳನ್ನು ಪೂರೈಸಿದೆ. ಭಾರತ ತಂಡ ಬಹುಪಾಲು ಕಹಿ ಅನುಭವಿಸಿದ್ದು, ಕೇವಲ 3 ಪದಕಗಳು ಮಾತ್ರ ಭಾರತದ ಪಾಲಿಗೆ ಸಂದಿವೆ. ಆದರೆ, ನಾಳೆ ಭಾರತೀಯ ಅಥ್ಲೀಟ್​ಗಳ ಪಾಲಿಗೆ ಮಹತ್ವದ್ದಾಗಿದ್ದು, ಮತ್ತೆರಡು ಪದಕ ಖಚಿತವಾಗುವ ಸಾಧ್ಯತೆಯಿದೆ.

ಅಥ್ಲೆಟಿಕ್ಸ್​ನಲ್ಲಿ ಭಾರತದ ಬಹುದೊಡ್ಡ ಪದಕದ ಭರರವಸೆಯಾಗಿರುವ ಜಾವಲಿನ್​ ಥ್ರೋವರ್​, ಬಾಕ್ಸಿಂಗ್​ನಲ್ಲಿ ಪದಕ ಖಚಿತವಾಗಿದ್ದರೂ ಐತಿಹಾಸಿಕ ಫೈನಲ್​​ ಮೇಲೆ ಕಣ್ಣಟ್ಟಿರುವ ಲವ್ಲಿನಾ ಹಾಗೂ ಚೆಕ್​ ದೇ ಇಂಡಿಯಾ ಸಿನಿಮಾ ರೀತಿ ಅಚ್ಚರಿಯ ಗೆಲುವಿನೊಂದಿಗೆ ಮುನ್ನಗ್ಗುತ್ತಿರುವ ಮಹಿಳಾ ಹಾಕಿ ತಂಡ ಕಣಕ್ಕಿಳಿಯಲಿದೆ. ಬುಧವಾರ ಎದುರು ನೋಡಬಹುದಾದ ಪ್ರಮುಖ ಕ್ರೀಡೆ ಮತ್ತು ಕ್ರೀಡಾಪಟುಗಳ ವಿವಿರ

ಭಾರತ ಮಹಿಳಾ ಹಾಕಿ ತಂಡ

ಸತತ 3 ಪಂದ್ಯಗಳನ್ನು ಸೋತರ ಎದೆಗುಂದದೆ ಧೈರ್ಯ ಮತ್ತು ದೃಢನಿಶ್ಚಯದಿಂದ ಮುನ್ನಗ್ಗುತ್ತಿರುವ ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ತಂಡ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈಗಾಗಲೇ ಇತಿಹಾಸ ನಿರ್ಮಿಸಿದೆ.

ಕ್ವಾರ್ಟರ್ ಫೈನಲ್​ನಲ್ಲಿ 3 ಬಾರಿಯ ಒಲಿಂಪಿಕ್ಸ್​ ಚಾಂಪಿಯನ್​ ಮತ್ತು 2 ಬಾರಿ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತಕ್ಕೆ ಬುಧವಾರ ಸೆಮಿಫೈನಲ್​ನಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಅರ್ಜೆಂಟೀನಾ ಅಂತಿಮ 8ರ ಘಟ್ಟದಲ್ಲಿ ಜರ್ಮನಿಯನ್ನು 3-0ಯಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಲವ್ಲಿನಾ ಬೋರ್ಗೊಹೈನ್​

69 ಕೆಜಿ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾದ ಬಾಕ್ಸರ್ ಮಣಿಸಿ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿರುವ ಲವ್ಲಿನಾ ಬೊರ್ಗೊಹೈನ್ ಬುಧವಾರ ನಡೆಯುವ ಸೆಮಿಫೈನಲ್ಸ್​ನಲ್ಲಿ ಹಾಲಿ ವಿಶ್ವ ಚಾಂಪಿಯನ್​ ಆಗಿರುವ ಟರ್ಕಿಯ ಬುಸಾನಾಜ್​ ಸುರ್ಮೆನೆಲಿ ವಿರುದ್ಧ ಕಾದಾಡಲಿದ್ದಾರೆ. ಈ ಪಂದ್ಯದಲ್ಲಿ ಲವ್ಲಿನಾ ಗೆದ್ದರೆ ಒಲಿಂಪಿಕ್ಸ್​ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊಟ್ಟ ಮೊದಲ ಬಾಕ್ಸರ್​ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ.

ನೀರಜ್ ಚೋಪ್ರಾ

ವಿಶ್ವದ 4ನೇ ಶ್ರೇಯಾಂಕಿತನಾಗಿರುವ ಭಾರತದ 23 ವರ್ಷದ ಜಾವಲಿನ್​ ಥ್ರೋವರ್​ ನೀರಜ್​ ಚೋಪ್ರಾ ಒಲಿಂಪಿಕ್ಸ್​ನಲ್ಲಿ ಪೋಡಿಯಂ ಏರಲಿದ್ದಾರೆ ಎಂಬ ಭರವಸೆ ಕೋಟ್ಯಂತರ ಭಾರತೀಯರ ಮನದಲ್ಲಿದೆ. ಅವರು ಜಾವಲಿನ್ ಸ್ಟಾರ್​ ಜೋಹನೆಸ್​ ವೆಟ್ಟರ್​ ಇರುವ ಗುಂಪಿನಲ್ಲಿ ಅವಕಾಶ ಪಡೆದಿದ್ದಾರೆ. ಇವರ ಜೊತೆ ಭಾರತದ ಶಿವಪಾಲ್ ಸಿಂಗ್ ಕೂಡ ಪದಾರ್ಪಣೆ ಮಾಡಿದ್ದಾರೆ.

ಇದನ್ನು ಓದಿ:Olympics ಕುಸ್ತಿ: ರವಿ, ದೀಪಕ್​ಗೆ ಸುಲಭ ಸವಾಲು.... ಅನ್ಶು ಮಲ್ಲಿಕ್​ಗೆ ಯುರೋಪಿಯನ್ ಚಾಂಪಿಯನ್ ಎದುರಾಳಿ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.