ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತದ ವೇಟ್ ಲಿಫ್ಟಿಂಗ್ ಮೀರಾಬಾಯಿ ಚಾನು ಇಂದು ಜಪಾನ್ನಿಂದ ತವರಿಗೆ ಮರಳಿದ್ದಾರೆ. ಏರ್ಪೋರ್ಟ್ನಲ್ಲಿ ತರಬೇತುದಾರ ವಿಜಯ್ ಶರ್ಮಾ ಜತೆಗಿನ ಫೋಟೋವನ್ನು ಚಾನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ನನ್ನ ಜೀವನದ ಸ್ಮರಣೀಯ ಕ್ಷಣಗಳಿಗಾಗಿ ಟೋಕಿಯೋ 2020 ಗೆ ಧನ್ಯವಾದಗಳು ಎಂದು ಕ್ಯಾಪ್ಷನ್ ನೀಡಿದ್ದಾರೆ.
-
Heading back to home 🇮🇳, Thank you #Tokyo2020 for memorable moments of my life. pic.twitter.com/6H2VpAxU1x
— Saikhom Mirabai Chanu (@mirabai_chanu) July 26, 2021 " class="align-text-top noRightClick twitterSection" data="
">Heading back to home 🇮🇳, Thank you #Tokyo2020 for memorable moments of my life. pic.twitter.com/6H2VpAxU1x
— Saikhom Mirabai Chanu (@mirabai_chanu) July 26, 2021Heading back to home 🇮🇳, Thank you #Tokyo2020 for memorable moments of my life. pic.twitter.com/6H2VpAxU1x
— Saikhom Mirabai Chanu (@mirabai_chanu) July 26, 2021
ಚಾನು ಅವರ ಟ್ವೀಟ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಪ್ರತಿಕ್ರಿಯೆ ನೀಡಿದೆ. ಜತೆಗೆ 1800 ಕ್ಕೂ ಹೆಚ್ಚು ರಿಟ್ವೀಟ್ಗಳು ಮತ್ತು 32 ಸಾವಿರ ಲೈಕ್ಗಳು ಬಂದಿವೆ. 2000ದಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಪದಕ ಗಳಿಸಿದ ಬಳಿಕ ಮತ್ಯಾರೂ ಈ ಸಾಧನೆ ಮಾಡಿರಲಿಲ್ಲ. ಇದೀಗ ಮೀರಾಬಾಯಿ ಚಾನು ಮಹಿಳಾ 49 ಕೆಜಿ ವಿಭಾಗದಲ್ಲಿ ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ಎತ್ತಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್, ಚಾನುಗೆ 1 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಜತೆಗೆ ರಾಜ್ಯ ಸರ್ಕಾರದಲ್ಲಿ ವಿಶೇಷ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಯಾವುದೇ ಸಾಧನೆಗೆ ಹಲವು ತ್ಯಾಗಗಳನ್ನು ಮಾಡಬೇಕು. ಅಂತಹ ಅನೇಕ ತ್ಯಾಗಗಳನ್ನು ನಾನು ಮಾಡಿದ್ದೇನೆ ಎಂದು ಚಾನು ಪ್ರತಿಕ್ರಿಯೆ ನೀಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಚಾನು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ದೇಶಕ್ಕಾಗಿ ಟೋಕಿಯೊ 2020 ರಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನೊಂದಿಗಿದ್ದ ಎಲ್ಲ ಭಾರತೀಯರಿಗೆ ಧನ್ಯವಾದ ಎಂದಿದ್ದಾರೆ.