ETV Bharat / sports

ಟೋಕಿಯೊದಲ್ಲಿ ಸೋತವರ ಕೈಹಿಡಿದ ‘ಟಾಟಾ’.. ಕಾರು ಗಿಫ್ಟ್ ನೀಡುವುದಾಗಿ ಘೋಷಣೆ

ಈ ಒಲಿಂಪಿಕ್ ಭಾರತಕ್ಕೆ ಪದಕಗಳಿಗಿಂತ ಹೆಚ್ಚಿನದ್ದಾಗಿದೆ. ನಮ್ಮ ಆಟಗಾರರ ಶ್ರಮ ಹಾಗೂ ಚೈತನ್ಯವನ್ನು ನಾವು ಸಂಭ್ರಮಿಸಬೇಕು. ಒತ್ತಡದ ನಡುವೆಯೂ ಅದ್ಭುತವಾಗಿ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ನಾವು ಪ್ರೋತ್ಸಾಹ ನೀಡಬೇಕು..

author img

By

Published : Aug 15, 2021, 8:44 PM IST

Altroz
Altroz

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾದ ಭಾರತೀಯ ಆಟಗಾರರಿಗೆ ಟಾಟಾ ಕಂಪನಿ ಬಂಪರ್ ಗಿಫ್ಟ್​ವೊಂದನ್ನು ನೀಡಲಿದೆ. ಇತ್ತೀಚಿಗೆ ಜಪಾನ್​ನಲ್ಲಿ ನಡೆದ ಟೋಕಿಯೊ 2020 ಒಲಿಂಪಿಕ್ಸ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದ ಭಾರತೀಯ ಆಟಗಾರರಿಗೆ ಸರ್ಕಾರ ಹಾಗೂ ಹಲವು ಸಂಸ್ಥೆಗಳು ಉಡುಗೊರೆ ನೀಡಿವೆ. ಜಾವೆಲಿನ್ ಥ್ರೋ ಪಟು ನೀರಜ್ ಜೋಪ್ರಾಗೆ ಮಹೀಂದ್ರಾ ಕಂಪನಿಯು ದುಬಾರಿ ಬೆಲೆಯ ಎಸ್​​ಯುವಿ ಕಾರು ಗಿಫ್ಟ್ ನೀಡುವುದಾಗಿ ಘೋಷಿಸಿದೆ.

ಇದೀಗ ಟಾಟಾ ಕಂಪನಿಯೂ ಕೂಡ ಭಾರತೀಯ ಆಟಗಾರರಿಗೆ ಉಡುಗೊರೆ ನೀಡಲು ಮುಂದಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ, ಕೊನೆಯ ಕ್ಷಣದಲ್ಲಿ ಪದಕ ಗೆಲ್ಲಲು ವಿಫಲಗೊಂಡ ಆಟಗಾರರಿಗೆ ಟಾಟಾ ‘ಅಲ್ಟ್ರಾಜ್‌’ ಕಾರು ಉಡುಗೊರೆ ನೀಡುವುದಾಗಿ ಪ್ರಕಟಿಸಿದೆ.

ಇದನ್ನೂ ಓದಿ: ಕ್ಷಮೆಯಾಚಿಸಿದ ವಿನೇಶ್​, ಆದ್ರೂ ವಿಶ್ವಚಾಂಪಿಯನ್​ಶಿಪ್​ನಲ್ಲಿ ಸ್ಪರ್ಧಿಸಲು ಅನುಮತಿ ನೀಡೋದು ಡೌಟ್​!

ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್​ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್​​ನ ಅಧ್ಯಕ್ಷ ಶೈಲೇಶ್ ಚಂದ್ರ, ಈ ಒಲಿಂಪಿಕ್ ಭಾರತಕ್ಕೆ ಪದಕಗಳಿಗಿಂತ ಹೆಚ್ಚಿನದ್ದಾಗಿದೆ. ನಮ್ಮ ಆಟಗಾರರ ಶ್ರಮ ಹಾಗೂ ಚೈತನ್ಯವನ್ನು ನಾವು ಸಂಭ್ರಮಿಸಬೇಕು. ಒತ್ತಡದ ನಡುವೆಯೂ ಅದ್ಭುತವಾಗಿ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ನಾವು ಪ್ರೋತ್ಸಾಹ ನೀಡಬೇಕು.

ಈ ಆಟಗಾರರು ಪದಕ ಗೆಲ್ಲುವಲ್ಲಿ ಸೋತಿರಬಹುದು. ಆದರೆ, ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಅವರ ತ್ಯಾಗ ಹಾಗೂ ಪರಿಶ್ರಮ ಭಾರತೀಯ ಉದಯೋನ್ಮುಖ ಯುವ ಆಟಗಾರರಿಗೆ ಖಂಡಿತವಾಗಿಯೂ ಸ್ಫೂರ್ತಿ ಆಗಿದೆ. ಇವರನ್ನು ನಾವು ಗೌರವಿಸಿ ಅಭಿನಂದಿಸಬೇಕು. ಈ ನಿಟ್ಟಿನಲ್ಲಿ ಗೋಲ್ಡನ್ ಕಲರ್ ನ ‘ಅಲ್ಟ್ರಾಜ್‌’ ಕಾರು ಉಡುಗೊರೆ ರೂಪದಲ್ಲಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು, ‘ಅಲ್ಟ್ರಾಜ್‌’ ಕಾರು ಕಳೆದ ವರ್ಷ ಮಾರುಕಟ್ಟೆಗೆ ಪರಿಚಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.