ETV Bharat / sports

Tokyo Paralympics: ಶೂಟಿಂಗ್​ನಲ್ಲಿ ನರ್ವಾಲ್​ಗೆ ಚಿನ್ನ, ಸಿಂಗ​ರಾಜ್​ಗೆ ಬೆಳ್ಳಿ ಪದಕ

ಟೋಕಿಯೊ ಪ್ಯಾರಾಲಿಂಪಿಕ್(Tokyo Paralympics)​ನಲ್ಲಿ ಭಾರತದ ಕ್ರೀಡಾಪಟುಗಳು ಇದೀಗ ಫೈನಲ್ ಸುತ್ತಿಗೆ ಲಗ್ಗೆ ಇಡುತ್ತಿದ್ದಾರೆ. ಮಿಶ್ರ 50 ಮೀಟರ್​ ಶೂಟಿಂಗ್​ನಲ್ಲಿ ಇಬ್ಬರು ಭಾರತೀಯ ಶೂಟರ್ಸ್​ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೂಟಿಂಗ್​ನಲ್ಲಿ ನರ್ವಾಲ್​ ಚಿನ್ನಕ್ಕೆ ಮುತ್ತಿಕ್ಕಿದ್ದರೆ, ಇನ್ನೋರ್ವ ಶೂಟರ್​ ಸಿಂಗ್​ರಾಜ್​ ಬೆಳ್ಳಿ ಪದಕ ಗೆದ್ದಿದ್ದಾರೆ.

singhraj-and-manish-narwal-qualify-for-final-in-shooting
ಶೂಟಿಂಗ್​ನಲ್ಲಿ ನರ್ವಾಲ್​ಗೆ ಚಿನ್ನ, ಸಿಂಗ​ರಾಜ್​ಗೆ ಬೆಳ್ಳಿ ಪದಕ
author img

By

Published : Sep 4, 2021, 7:58 AM IST

Updated : Sep 4, 2021, 12:50 PM IST

ಟೋಕಿಯೊ (ಜಪಾನ್​): ಟೋಕಿಯೊ ಪ್ಯಾರಾಲಿಂಪಿಕ್(Tokyo Paralympics)​ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದೀಗ P4​​​ ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರೆ, ಸಿಂಗರಾಜ್​ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

19 ವರ್ಷದ ಮನೀಶ್ ನರ್ವಾಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದರೆ, ಸಿಂಗರಾಜ್​ 2ನೇ ಸ್ಥಾನ ಪಡೆದು ಬೆಳ್ಳಿಗೆ ಮುತ್ತಿಟ್ಟಿದ್ದಾರೆ. ಇದಕ್ಕೂ ಮೊದಲು ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಪ್ರಮೋದ್ ಭಗತ್ ಫೈನಲ್ ಪ್ರವೇಶಿಸಿದ್ದರು. ಇದೀಗ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ.

ಸಿಂಗರಾಜ್​ ಪದಕ ಗೆಲ್ಲುತ್ತಿದ್ದಂತೆ ಇತ್ತ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಹರಿಯಾಣದ ನಿವಾಸದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ನನಗೆ ಸಂತೋಷವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ನನ್ನ ಸಂತೋಷಕ್ಕೆ ಮಿತಿಯಿಲ್ಲ ಎಂದು ಸಿಂಗರಾಜ್ ತಂದೆ ಪ್ರೇಮ್ ಸಿಂಗ್ ಅಧಾನ ಸಂತಸ ಹಂಚಿಕೊಂಡಿದ್ದಾರೆ.

ಶೂಟಿಂಗ್​ನಲ್ಲಿ ನರ್ವಾಲ್​ಗೆ ಚಿನ್ನ, ಸಿಂಗ​ರಾಜ್​ಗೆ ಬೆಳ್ಳಿ ಪದಕ

ಇತ್ತ ಮನೀಶ್​ ಅಗರ್ವಾಲ್ ಊರಿನಲ್ಲೂ ಸಂಭ್ರಮ ಮನೆ ಮಾಡಿದ್ದು, ಅವರ ನಿವಾಸದೆದರು ಕುಟುಂಬಸ್ಥರು, ಸ್ನೇಹಿತರು ಕುಣಿದು ಸಂಭ್ರಮಿಸಿದ್ದಾರೆ.

ಇದಕ್ಕೂ ಮೊದಲು ಶೋಪೀಸ್ ಈವೆಂಟ್‌ನಲ್ಲಿ ಈಗಾಗಲೇ ಒಂದು ಫೈನಲ್ ಆಡಿದ್ದ ಮನೀಶ್ ಮತ್ತು ಸಿಂಗ್​​ರಾಜ್ ಮೊದಲ ಸರಣಿಯ ಅಂತ್ಯದ ನಂತರ ಕ್ರಮವಾಗಿ 91 ಮತ್ತು 93 ಅಂಕ ಗಳಿಸಿದರು.

2ನೇ ಸರಣಿಯಲ್ಲಿ ಮನೀಶ್ ಒಟ್ಟು 93 ಅಂಕ ಮತ್ತು ಸಿಂಗರಾಜ್ 90 ಅಂಕ ಗಳಿಸಿದ್ದರು. 3ನೇ ಹಂತದಲ್ಲಿ 91 ಮತ್ತು 91 ಅಂಕಗಳಿಸಿ ಒಂದು ಹಂತದಲ್ಲಿ ಅಗ್ರಸ್ಥಾನದಲ್ಲಿದ್ದರು.

ಆದಾಗ್ಯೂ, ಭಾರತೀಯ ಜೋಡಿ ನಂತರದ ಸರಣಿಯಲ್ಲಿ 5ನೇ ಸ್ಥಾನಕ್ಕಿಂತ ಕೆಳಗಿಳಿಯಿತು. ಮನೀಶ್ ಮತ್ತು ಸಿಂಗ​​​​ರಾಜ್ ನಂತರ 6ನೇ ಮತ್ತು ಅಂತಿಮ ಸರಣಿಯಲ್ಲಿ 7ನೇ ಮತ್ತು 8ನೇ ಸ್ಥಾನದಿಂದ ಆರಂಭಿಸಿದರು. ಅಂತಿಮ ಸರಣಿಯಲ್ಲಿನ ಉತ್ತಮ ಪ್ರದರ್ಶನವು ಭಾರತೀಯ ಶೂಟರ್‌ಗಳಿಗೆ ಫೈನಲ್ ಸ್ಥಾನ ಖಚಿತಪಡಿಸಿತ್ತು.

ಈ ವಾರದ ಆರಂಭದಲ್ಲಿ, ಸಿಂಗರಾಜ್​ ಪಿ1 ಪುರುಷರ 10 ಮೀ. ಏರ್ ಪಿಸ್ತೂಲ್ ಶೂಟಿಂಗ್​​ನ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

ಪಾರಾಲಿಂಪಿಕ್​​​​ನಲ್ಲಿ ಚಿನ್ನದ ಪದಕ ಗೆದ್ದ ಮನೀಶ್ ನರ್ವಾಲ್ ಅವರಿಗೆ ಹರಿಯಾಣ ಸರ್ಕಾರವು 6 ಕೋಟಿ ರೂಪಾಯಿಯ ಬಹುಮಾನ ಘೋಷಿಸಿದೆ. ಜೊತೆಗೆ ಬೆಳ್ಳಿ ಪದಕ ತನ್ನದಾಗಿಸಿಕೊಂಡ ಸಿಂಗರಾಜ್​ ಅವರಿಗೆ 4 ಕೋಟಿ ರೂಪಾಯಿ ಘೋಷಿಸಲಾಗಿದೆ.

ಓದಿ: Paralympics: ಭಾರತಕ್ಕೆ ಮತ್ತೊಂದು ಪದಕ ಖಚಿತ.. ಪ್ರಮೋದ್ ಭಗತ್ Badminton ಫೈನಲ್ ಪ್ರವೇಶ

Last Updated : Sep 4, 2021, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.