ETV Bharat / sports

3000 ಮೀಟರ್‌ ಸ್ಟೀಪಲ್‌ಚೇಸ್​ ಫೈನಲ್​ನಿಂದ ಹೊರ ಬಿದ್ದರೂ ರಾಷ್ಟ್ರೀಯ ದಾಖಲೆ ಬರೆದ ಅವಿನಾಶ್​ ಸಾಬ್ಲೆ!

author img

By

Published : Jul 30, 2021, 7:58 AM IST

3000 ಮೀಟರ್‌ ಸ್ಟೀಪಲ್‌ಚೇಸ್ ಓಟದಲ್ಲಿ 7ನೇ ಸ್ಥಾನ ಪಡೆದ ಅವಿನಾಶ್​ ಸಾಬ್ಲೆ ಒಲಿಂಪಿಕ್ಸ್​ ಫೈನಲ್​ನಿಂದ ಹೊರ ಬಿದ್ರೂ ಸಹ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

Sable betters own national record, Sable betters own national record in Tokyo Olympics, Avinash Sable, Avinash Sable news,  ರಾಷ್ಟ್ರೀಯ ದಾಖಲೆ ಬರೆದ ಅವಿನಾಶ್​ ಸಾಬ್ಲೆ,  ಫೈನಲ್​ನಿಂದ ಹೊರ ಬಿದ್ದು ರಾಷ್ಟ್ರೀಯ ದಾಖಲೆ ಬರೆದ ಅವಿನಾಶ್​ ಸಾಬ್ಲೆ, ಅವಿನಾಶ್​ ಸಾಬ್ಲೆ, ಅವಿನಾಶ್​ ಸಾಬ್ಲೆ ಸುದ್ದಿ,
ಅವಿನಾಶ್​ ಸಾಬ್ಲೆ

ಟೋಕಿಯೋ: 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದ ಭಾರತದ ಅಥ್ಲೀಟ್‌ ಅವಿನಾಶ್‌ ಸಾಬ್ಲೆ ಪುರುಷರ 3000 ಮೀಟರ್‌ ಸ್ಟೀಪಲ್‌ಚೇಸ್​ ಓಟದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

3000 ಮೀಟರ್ ಸ್ಟೀಪಲ್‌ಚೇಸ್ ಗುರಿಯನ್ನು ತಲುಪಲು 26 ವರ್ಷದ ಸಾಬ್ಲೆ 8: 18.12 ಸಮಯವನ್ನು ತೆಗೆದುಕೊಂಡರು. ಈ ಮೂಲಕ ಅವರು 44 ಅಥ್ಲೆಟಿಕ್ಸ್​ನಲ್ಲಿ 13ನೇ ಸ್ಥಾನ ಪಡೆದರು. ಹೀಗಾಗಿ ಅವರು ಫೈನಲ್​ ಪಂದ್ಯದಿಂದ ಹೊರ ಬಿದ್ದಿದ್ದಾರೆ.

  • Heartbreak for Avinash Sable as even his National Record 8:18.12 is not enough to qualify for Final
    Overall he finished 13th amongst 44 athletes. Total 15 (Top 3 from 3 Heats + 6 best athletes qualify for Final)
    Proud of your effort Avinash #Tokyo2020withIndia_AllSports pic.twitter.com/iRwqssDjbT

    — India_AllSports (@India_AllSports) July 30, 2021 " class="align-text-top noRightClick twitterSection" data=" ">

Heartbreak for Avinash Sable as even his National Record 8:18.12 is not enough to qualify for Final
Overall he finished 13th amongst 44 athletes. Total 15 (Top 3 from 3 Heats + 6 best athletes qualify for Final)
Proud of your effort Avinash #Tokyo2020withIndia_AllSports pic.twitter.com/iRwqssDjbT

— India_AllSports (@India_AllSports) July 30, 2021

ಮಾರ್ಚ್‌ನಲ್ಲಿ ನಡೆದ ಫೆಡರೇಷನ್ ಕಪ್ ಓಟದಲ್ಲಿ ಸಾಬ್ಲೆ 8: 20:20 ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಒಲಿಂಪಿಕ್ಸ್​ನಲ್ಲಿ ಈಗ ಮುರಿದಿದ್ದಾರೆ. ಆದರೆ, ಫೈನಲ್​ ತಲುಪುವಲ್ಲಿ ವಿಫಲರಾಗಿದ್ದಾರೆ. 2019ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆ​ಯಲು 8 ನಿಮಿಷ 22 ಸೆಕೆಂಡ್‌ಗಳ ಮಾನ​ದಂಡ ಇರಿ​ಸ​ಲಾ​ಗಿತ್ತು.

ಆ ವೇಳೆ ನಡೆದ ಸ್ಪರ್ಧೆ​ಯಲ್ಲಿ ಅವಿ​ನಾಶ್‌ 8 ನಿಮಿಷ 21:37 ಸೆಕೆಂಡ್‌ಗಳಲ್ಲಿ ಓಟ ಪೂರ್ಣ​ಗೊ​ಳಿಸಿ ಟೋಕಿಯೋ ಗೇಮ್ಸ್‌ಗೆ ಪ್ರವೇಶ ಪಡೆ​ದಿದ್ದರು. ಜತೆಗೆ ತಮ್ಮದೇ ಹೆಸ​ರಿ​ನ​ಲ್ಲಿದ್ದ ರಾಷ್ಟ್ರೀಯ ದಾಖಲೆ (8:28:94) ಯನ್ನು ಮುರಿದಿದ್ದರು. 2019 ವರ್ಷದಲ್ಲಿ 4 ಬಾರಿ ರಾಷ್ಟ್ರೀಯ ದಾಖಲೆ ಮುರಿದ ಸಾಧನೆಯನ್ನು ಅವಿ​ನಾಶ್‌ ಮಾಡಿದ್ದಾರೆ.

ಭಾರ​ತೀಯ ಸೇನೆಯಲ್ಲಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ರುವ ಮಹಾ​ರಾಷ್ಟ್ರ ಮೂಲದ 25 ವರ್ಷದ ಅವಿ​ನಾಶ್‌, 2013-14ರಲ್ಲಿ ಸಿಯಾ​ಚಿನ್‌ನಲ್ಲಿ ಸೇವೆ ಸಲ್ಲಿ​ಸಿದ್ದರು. ರಾಜ​ಸ್ಥಾ​ನ, ಸಿಕ್ಕಿಂನಲ್ಲೂ ಅವರು ಸೇವೆ ಸಲ್ಲಿ​ಸಿ​ದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.