ETV Bharat / sports

ಚಿನ್ನದ ಅವನಿ'ಗೆ 3 ಕೋಟಿ ರೂ., ದೇವೇಂದ್ರ ಜಜಾರಿಯಾಗೆ 2 ಕೋಟಿ ರೂ. ಘೋಷಿಸಿದ ರಾಜಸ್ಥಾನ್ ಸರ್ಕಾರ

ಪ್ಯಾರಾಲಿಂಪಿಕ್ಸ್​ನಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದ ದೇವೇಂದ್ರ ಜಜಾರಿಯಾ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಅವರು 2004ರ ಅಥೆನ್ಸ್ ಮತ್ತು 2016ರ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಪಡೆದಿದ್ದರು. ಇದು ಅವರಿಗೆ ಸಂದಿರುವ 3ನೇ ಪ್ಯಾರಾಲಿಂಪಿಕ್ಸ್ ಪದಕವಾಗಿದೆ..

Rajasthan government announce cash award to medal winners
ಅವನಿ-ಜಜಾರಿಯಾಗೆ ನಗದು ಬಹುಮಾನ ಘೋಷಣೆ
author img

By

Published : Aug 30, 2021, 9:13 PM IST

ಜೈಪುರ : ಪ್ಯಾರಾಲಿಂಪಿಕ್ಸ್​ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿರುವ ಪ್ಯಾರಾ ಶೂಟರ್​ ಅವನಿ ಲೇಖಾರಾ ಅವರಿಗೆ 3 ಕೋಟಿ ರೂಪಾಯಿ ಮತ್ತು ಬೆಳ್ಳಿ ಗೆದ್ದ ದೇವೇಂದ್ರ ಜಜಾರಿಯಾ ಅವರಿಗೆ 2 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ.

ಸೋಮಾರ 19 ವರ್ಷದ ಜೈಪುರ ಮೂಲದ ಅವಿನ 10 ಮೀಟರ್​ ಏರ್​ ರೈಫಲ್​​ನಲ್ಲಿ ಪ್ಯಾರಾಲಿಂಪಿಕ್ಸ್​ ದಾಖಲೆಯ 249.5 ಅಂಕಗಳೊಡನೆ ಚಿನ್ನ ಗೆದ್ದಿದ್ದರು. ಅಲ್ಲದೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಮತ್ತು ಒಟ್ಟಾರೆ 4ನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇನ್ನು, ಪ್ಯಾರಾಲಿಂಪಿಕ್ಸ್​ನಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದ ದೇವೇಂದ್ರ ಜಜಾರಿಯಾ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಅವರು 2004ರ ಅಥೆನ್ಸ್ ಮತ್ತು 2016ರ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಪಡೆದಿದ್ದರು. ಇದು ಅವರಿಗೆ ಸಂದಿರುವ 3ನೇ ಪ್ಯಾರಾಲಿಂಪಿಕ್ಸ್ ಪದಕವಾಗಿದೆ.

ಸುಂದರ್​ ಸಿಂಗ್ ಗುರ್ಜಾರ್​ ಕೂಡ ಜಾವಲಿನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮತ್ತೊಬ್ಬ ಕ್ರೀಡಾಪಟುವಾಗಿದ್ದು, ಇವರಿಗೂ ಒಂದು ಕೋಟಿ ಬಹುಮಾನ ಸಿಗಲಿದೆ. ರಾಜಸ್ಥಾನ ಸರ್ಕಾರ ಹಿಂದೆಯೇ ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ವಿಜೇತರಿಗೆ 3 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 2 ಕೋಟಿ ರೂ. ಹಾಗೂ ಕಂಚು ಪದಕ ವಿಜೇತರಿಗೆ 1 ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಿಸಿತ್ತು. ಜೊತೆಗೆ ಅರಣ್ಯ ಇಲಾಖೆಯಲ್ಲಿ ಪದಕ ಗೆದ್ದಿರುವ ರಾಜ್ಯದ ಈ ಮೂವರು ಕ್ರೀಡಾಪಟುಗಳನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗೆ ನೇಮಿಸಲಾಗಿದೆ ಎಂದು ಸಿಎಂ ಗೆಹ್ಲೋಟ್ ತಿಳಿಸಿದ್ದರು.

ಇದನ್ನು ಓದಿ:ಪ್ಯಾರಾಲಿಂಪಿಕ್ಸ್​ 'ಚಿನ್ನ' ಅವಿನ ಲೇಖಾರಾಗೆ ಆನಂದ್​ ಮಹೀಂದ್ರಾ ಭರ್ಜರಿ ಗಿಫ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.