ನವದೆಹಲಿ: ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಕೊಟ್ಟಿರುವ ವೇಟ್ಲಿಫ್ಟರ್ ಮೀರಾಬಾಯಿ ಚನು ಅವರಿಗೆ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ 2 ಕೋಟಿ ರೂ ನಗದು ಬಹುಮಾನ ಮತ್ತು ಅವರ ರೈಲ್ವೇಸ್ ಹುದ್ದೆಯಲ್ಲಿ ಬಡ್ತಿ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
"ರೈಲ್ವೆ ಮಿನಿಸ್ಟರ್ ಅಶ್ವಿನಿ ವೈಷ್ಣವ್ ಇಂದು ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ರೈಲ್ವೇಸ್ ವೇಟ್ಲಿಫ್ಟರ್ ಮೀರಾಬಾಯಿ ಚನು ಅವರನ್ನು ಭೇಟಿಯಾಗಿ ಸನ್ಮಾನಿಸಿದ್ದಾರೆ. ಟೋಕಿಯೋಯಲ್ಲಿ ಅದ್ಭುತ ಪ್ರದರ್ಶನ ತೋರಿ ದೇಶದ ಗೌರವವನ್ನು ಹೆಚ್ಚಿಸಿದ್ದಕ್ಕೆ ಚನು ಅವರಿಗೆ 2 ಕೋಟಿ ರೂ ನಗದು ಬಹುಮಾನ ಮತ್ತು ಉದ್ಯೋಗದಲ್ಲಿ ಬಡ್ತಿ ನೀಡುವುದಾಗಿ ಘೋಷಿಸಿದ್ದಾರೆ" ಎಂದು ಭಾರತೀಯ ರೈಲ್ವೇ ತನ್ನ ಅಧಿಕೃತ ಟ್ವಿಟರ್ನಲ್ಲಿ ಸೋಮವಾರ ಪ್ರಕಟಿಸಿದೆ.
-
Hon'ble MR, Sh. @AshwiniVaishnaw felicitates Olympic silver medallist & Indian Railways' weightlifter, Ms.@mirabai_chanu
— Ministry of Railways (@RailMinIndia) July 26, 2021 " class="align-text-top noRightClick twitterSection" data="
Hon'ble MR announces cash award of Rs 2Cr and promotion for her splendid performance at #TokyoOlympics2020.#Cheer4India pic.twitter.com/kb5OGUnIOQ
">Hon'ble MR, Sh. @AshwiniVaishnaw felicitates Olympic silver medallist & Indian Railways' weightlifter, Ms.@mirabai_chanu
— Ministry of Railways (@RailMinIndia) July 26, 2021
Hon'ble MR announces cash award of Rs 2Cr and promotion for her splendid performance at #TokyoOlympics2020.#Cheer4India pic.twitter.com/kb5OGUnIOQHon'ble MR, Sh. @AshwiniVaishnaw felicitates Olympic silver medallist & Indian Railways' weightlifter, Ms.@mirabai_chanu
— Ministry of Railways (@RailMinIndia) July 26, 2021
Hon'ble MR announces cash award of Rs 2Cr and promotion for her splendid performance at #TokyoOlympics2020.#Cheer4India pic.twitter.com/kb5OGUnIOQ
ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವುದಕ್ಕೆ ಚನುಗೆ ಅಭಿನಂದನೆಗಳನ್ನು ಅರ್ಪಿಸುತ್ತೇನೆ. ಅವರು ವಿಶ್ವದಾದ್ಯಂತ ಕೋಟ್ಯಂತರ ಜನರಿಗೆ ತಮ್ಮ ಸಾಮರ್ಥ್ಯದ ಮೂಲಕ ಸ್ಪೂರ್ತಿಯಾಗಿದ್ದಾರೆ. ಇದಕ್ಕೆಲ್ಲ ಕಾರಣ ಅವರ ಅದಮ್ಯ ಉತ್ಸಾಹ ಮತ್ತು ದೃಢನಂಬಿಕೆ ಕಾರಣ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಅಭಿವೃದ್ದಿ ಸಚಿವ ಹಾಗೂ ಮಾಜಿ ಕ್ರೀಡಾ ಸಚಿವರಾದ ಕಿರಣ್ ರಿಜಿಜು ಕೂಡ ಚನು ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ, ಅವರನ್ನು ಸನ್ಮಾನಿಸಿದ್ದರು.
2000ರಲ್ಲಿ ಸಿಡ್ನಿ ಒಲಿಂಪಿಕ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿ ಭಾರತಕ್ಕೆ ವೇಟ್ ಲಿಫ್ಟಿಂಗ್ನಲ್ಲಿ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಮೀರಾಬಾಯಿ ಚನು 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ. ಸಿಂಧು ನಂತರ ಬೆಳ್ಳಿ ಗೆದ್ದ ಏಕೈಕ ಅಥ್ಲೀಟ್ ಎನಿಸಿಕೊಂಡಿದ್ದಾರೆ.
ಇದನ್ನು ಓದಿ:Tokyo Olympics: 'ಬೆಳ್ಳಿ ಹುಡುಗಿ' ಮೀರಾಬಾಯಿ ಚನು ಈಗ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ