ETV Bharat / sports

ಭಾರತಕ್ಕೆ ಬಂದ ಕಂಚಿನ ಪದಕ ವಿಜೇತೆ ಸಿಂಧು.. Airportನಲ್ಲೇ ಸಿಕ್ಕಿತು ಅದ್ಧೂರಿ ಸ್ವಾಗತ - ಟೋಕಿಯೋ ಒಲಿಂಪಿಕ್ಸ್​

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧು, ಇಂದು ತವರಿಗೆ ವಾಪಸ್​ ಆಗಿದ್ದಾರೆ.

PV Sindhu
PV Sindhu
author img

By

Published : Aug 3, 2021, 4:57 PM IST

Updated : Aug 3, 2021, 6:17 PM IST

ನವದಹಲಿ: ಜಪಾನ್​​ನ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿರುವ ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ಭಾರತಕ್ಕೆ ಬಂದ ಕಂಚಿನ ಪದಕ ವಿಜೇತೆ ಸಿಂಧು

ಬ್ಯಾಡ್ಮಿಂಟನ್​ ಸಿಂಗಲ್ಸ್​​ನಲ್ಲಿ ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದ ಸಿಂಧು, ತೈ ಜು ಯಿಂಗ್​ ವಿರುದ್ಧ ಸೋಲು ಕಂಡಿದ್ದರು. ಇದಾದ ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಹೀ ಬಿಂಗ್ ಜಿಯಾವೊ ವಿರುದ್ಧ ಗೆಲುವು ಸಾಧಿಸಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅವರು ಭಾರತಕ್ಕೆ ಬರುತ್ತಿದ್ದಂತೆ ಅದ್ಧೂರಿಯಾಗಿ ವೆಲ್​ಕಮ್ ಮಾಡಿಕೊಳ್ಳಲಾಗಿದೆ.

  • #WATCH "I am very happy and excited. I am thankful to everyone including the Badminton Association for supporting and encouraging me. This is a happy moment," says #Olympics medallist PV Sindhu on her return to India pic.twitter.com/xfoL63Zzd8

    — ANI (@ANI) August 3, 2021 " class="align-text-top noRightClick twitterSection" data=" ">

ಈ ವೇಳೆ ಮಾತನಾಡಿರುವ ಸಿಂಧು, ನಾನು ತುಂಬಾ ಸಂತೋಷಗೊಂಡಿದ್ದೇನೆ. ನನಗೆ ಸಹಕರಿಸಿ, ಬೆಂಬಲಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಪೋರ್ಟ್ ಮಾಡಿರುವ ಬ್ಯಾಡ್ಮಿಂಟನ್​​ ಅಸೋಷಿಯೇಷನ್​ಗೂ ಥ್ಯಾಂಕ್ಸ್​​. ಇದು ನನಗೆ ಸಂತೋಷದ ಸಮಯ ಎಂದು ಸಿಂಧು ಹೇಳಿದ್ದಾರೆ.

ಇದನ್ನೂ ಓದಿರಿ: ಪಿ ವಿ ಸಿಂಧು ಸಿಂಧು, ಪಿಎಂ ಮೋದಿಗೆ ಮಂಗಳೂರು ಪಬ್ಬಾಸ್​ನಿಂದ ಐಸ್ ಕ್ರೀಂ ಆಫರ್

2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​ನಲ್ಲಿ ಸಿಂಧು ಬೆಳ್ಳಿ ಪದಕ ಜಯಿಸಿ ಸಾಧನೆ ಮಾಡಿದ್ದರು. ಈ ಬಾರಿ ಅವರು ಕಂಚಿನ ಪದಕಕ್ಕೆ ಮುತ್ತಿಕ್ಕುವ ಮೂಲಕ ಬ್ಯಾಡ್ಮಿಂಟನ್​ ವಿಭಾಗದಲ್ಲಿ ಒಲಿಂಪಿಕ್ಸ್​ನಲ್ಲಿ ಸತತವಾಗಿ ಎರಡು ಬಾರಿ ಪದಕ ಗೆದ್ದಿರುವ ಮೊದಲ ಭಾರತೀಯ ಮಹಿಳಾ ಪಟು ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ.

Last Updated : Aug 3, 2021, 6:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.