ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೋಮವಾರ ಹೈಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ನಿಷಾದ್ ಕುಮಾರ್ ತಮ್ಮ ಸಾಧನೆಯ ಬಗ್ಗೆ ತಾವೂ ಹೆಮ್ಮ ಪಡುವುದಾಗಿ ತಿಳಿಸಿದ್ದಾರೆ. ಏಕೆಂದರೆ ಈ ಸ್ಥಾನಕ್ಕೆ ಬರುವಾಗ ತಮ್ಮ ಪಯಣ ತುಂಬಾ ಕಷ್ಟಕರವಾಗಿತ್ತು ಎಂದು ಕುಮಾರ್ ಹೇಳಿದ್ದಾರೆ.
ಕೇಂದ್ರ ಸಚಿವಾಲಯ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಮಾತು ಹೇಳಿದ್ದಾರೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಈ ಪದಕ ನನಗೆ ಅತ್ಯಂತ ಮಹತ್ವವಾಗಿದೆ. ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬೇಕೆಂಬುದು ನನ್ನ ಕನಸಾಗಿತ್ತು. ನಾನು ಈ ಕ್ರೀಡೆಗೆ ಯಾವುದೇ ಮನ್ನಣೆಯಲ್ಲಿದ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಿಂದ ಬಂದವನು. ಹಾಗಾಗಿ ನನ್ನ ಪಯಣ ತುಂಬಾ ಕಠಿಣವಾಗಿತ್ತು, ನನ್ನ ಸಾಧನೆಗೆ ನಾನೇ ಈಗ ಗರ್ವ ಪಡುತ್ತೇನೆ ಎಂದು ನಿಷಾಧ್ ಹೇಳಿದ್ದಾರೆ.
ನನಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಮತ್ತು ಟಾಪ್ಸ್(TOPS) ನನಗೆ ಅಗತ್ಯವಾದ ಪ್ರತಿಯೊಂದು ಪರಿಕರಗಳು, ಡಯಟ್ ಮತ್ತು ತರಬೇತಿಯನ್ನು ಒದಗಿಸಿಕೊಟ್ಟಿದೆ. ನಾನು ಯುವಕರಿಗೆ ನಿಮ್ಮ ಗುರಿಗೆ ಮೊದಲು ನೀವು ಹೊಂದಿಕೊಳ್ಳಿ ನಂತರ ಅದನ್ನು ಸಾಧನೆಸುವುದಕ್ಕಾಗಿ ಶೇಕಡಾ 100 ರಷ್ಟು ಪರಿಶ್ರಮಪಡಿ ಎಂದು ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ರಾಕೂರ್ ಬೆಳ್ಳಿ ಪದಕ ವಿಜೇತನಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಸಚಿವ ನಿಸಿತ್ ಪ್ರಮಾಣಿಕ್ ಕೂಡ ಉಪಸ್ಥಿತಿರಾಗಿದ್ದರು. ಇನ್ನು ನಿಷಾದ್ ಬೆಳ್ಳಿ ಪದಕ ಗೆದ್ದಿದ್ದಕ್ಕೆ ಹಿಮಾಚಲ ಪ್ರದೇಶ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.
ಇದನ್ನು ಓದಿ:Paralympics: ಭಾರತಕ್ಕೆ ಮತ್ತೆರಡು ಪದಕ: ಹೈಜಂಪ್ನಲ್ಲಿ ತಂಗವೇಲುಗೆ ಬೆಳ್ಳಿ, ಶರದ್ಗೆ ಕಂಚು