ETV Bharat / sports

Tokyo Paralympics: ಚೀನಾ ಸ್ಪರ್ಧಿಗೆ ಸೋಲುಣಿಸಿದ ಭಾವಿನಾ ಪಟೇಲ್​, ಚಿನ್ನದ ಪದಕ ನಿರೀಕ್ಷೆ

ಚೀನಾದ ಪ್ಯಾರಾ ಟೇಬಲ್​ ಟೆನ್ನಿಸ್ ಆಟಗಾರ್ತಿ ಮಿಯಾವೋ ಝಾಂಗ್ ಅವರನ್ನು ಮಣಿಸಿರುವ ಭಾರತದ ಭಾವಿನಾ ಪಟೇಲ್ ಫೈನಲ್​ಗೆ ಲಗ್ಗೆಯಿಟ್ಟಿದ್ದು, ಚಿನ್ನದ ಪದಕ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.

Paddler Bhavina Patel beats China's Miao Zhang storm into gold medal match
Tokyo Paralympics: ಚೀನಾ ಸ್ಪರ್ಧಿಯನ್ನು ಸೋಲಿಸಿದ ಭಾವಿನಾ ಪಟೇಲ್​, ಚಿನ್ನದ ಪದಕ ಪಂದ್ಯಕ್ಕೆ ಪ್ರವೇಶ
author img

By

Published : Aug 28, 2021, 7:53 AM IST

ಟೋಕಿಯೋ(ಜಪಾನ್): ಭಾರತೀಯ ಪ್ಯಾರಾ ಟೇಬಲ್​ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್, ಮಹಿಳಾ ಟೇಬಲ್ ಟೆನ್ನಿಸ್ ಸಿಂಗಲ್ಸ್​ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಆ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಸೆಮಿಫೈನಲ್​​​ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರನ್ನು 3-2 ಸೆಟ್​​ಗಳಿಂದ ಮಣಿಸಿದ ಅವರು ಫೈನಲ್ಸ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತದ ಪ್ಯಾರಾ ಟೆನ್ನಿಸ್‌ ಆಟಗಾರ್ತಿ ಹೊಸದೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾವಿನಾ ಪಟೇಲ್, ನಾನು ಪೂರ್ಣಶ್ರಮ ಹಾಕುತ್ತೇನೆ. ಮಾನಸಿಕವಾಗಿ ಫೈನಲ್ ಪಂದ್ಯಕ್ಕೆ ಸಿದ್ಧಳಾಗಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಭಾವಿನಾ ಪಟೇಲ್ ಸಾಧನೆಗೆ ಪ್ರತಿಕ್ರಿಯೆ ನೀಡಿರುವ ಭಾವಿನಾ ತಂದೆ ಹಸ್ಮುಖ್​ಭಾಯ್ ಪಟೇಲ್,​ ನನಗೆ ಇಂದು ಬಹಳ ಖುಷಿಯಾಗುತ್ತಿದೆ. ಭಾವಿನಾ ಖಚಿತವಾಗಿ ಚಿನ್ನದ ಪದಕ ಗೆಲ್ಲುತ್ತಾಳೆ. ಆಕೆ 20 ವರ್ಷಗಳಿಂದ ಟೇಬಲ್​ ಟೆನ್ನಿಸ್ ಆಡುತ್ತಿದ್ದಾಳೆ ಎಂದು ಪುತ್ರಿ ಪದಕ ಗೆಲುವಿನ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಹೆಚ್ಚಿನ ಮಾಹಿತಿಯಿಲ್ಲದೇ ಕೊರೊನಾ ಮೂಲ ಪತ್ತೆ ಅಸಾಧ್ಯ: ಅಮೆರಿಕ ಇಂಟೆಲಿಜೆನ್ಸ್ ಕಮ್ಯೂನಿಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.