ಟೋಕಿಯೋ(ಜಪಾನ್): ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಅತಿ ಕಡಿಮೆ ವಯಸ್ಸಿನಲ್ಲೇ ಚಿನ್ನದ ಪದಕ ಗೆಲ್ಲುವ ಮೂಲಕ 13 ವರ್ಷದ ಬಾಲಕಿ ಅಚ್ಚರಿಯ ದಾಖಲೆ ನಿರ್ಮಿಸಿದಳು. ಜಪಾನ್ನ ಮೊಮಿಜಿ ನಿಶಿಯಾ ಈ ಸಾಧನೆ ತೋರಿದ ಬಾಲಕಿ.
-
It's a teenage takeover 🙌
— ESPN India (@ESPNIndia) July 26, 2021 " class="align-text-top noRightClick twitterSection" data="
Momiji Nishiya (13), Rayssa Leal (13) and Funa Nakayama (16) took gold, silver and bronze at the women's street #skateboarding event! #Olympics #Tokyo2020 pic.twitter.com/xByOVHAwtr
">It's a teenage takeover 🙌
— ESPN India (@ESPNIndia) July 26, 2021
Momiji Nishiya (13), Rayssa Leal (13) and Funa Nakayama (16) took gold, silver and bronze at the women's street #skateboarding event! #Olympics #Tokyo2020 pic.twitter.com/xByOVHAwtrIt's a teenage takeover 🙌
— ESPN India (@ESPNIndia) July 26, 2021
Momiji Nishiya (13), Rayssa Leal (13) and Funa Nakayama (16) took gold, silver and bronze at the women's street #skateboarding event! #Olympics #Tokyo2020 pic.twitter.com/xByOVHAwtr
ಜಪಾನ್ನ ಟೋಕಿಯೋದಲ್ಲಿ 2020ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದ್ದು, ಹೊಸದಾಗಿ ಪರಿಚಯಿಸಿರುವ ಕ್ರೀಡೆ ಸ್ಕೇಟ್ ಬೋರ್ಡಿಂಗ್ನಲ್ಲಿ ನಿಶಿಯಾ ಚಿನ್ನದ ಪದಕ ಗೆದ್ದಿದ್ದಾರೆ. ಅವರು ಈ ಸ್ಪರ್ಧೆಯಲ್ಲಿ 15.26 ಅಂಕಗಳಿಕೆ ಮಾಡಿದ್ದಾರೆ. ಈ ಮೂಲಕ ಮೊದಲ ಮಹಿಳಾ ಸ್ಕೇಟ್ ಬೋರ್ಡಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
1936ರಲ್ಲಿ ಬರ್ಲಿನ್ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ 3 ಮೀಟರ್ ಸ್ಪ್ರಿಂಗ್ಬೋರ್ಡ್ನಲ್ಲಿ ಅಮೆರಿಕದ ಮಾರ್ಜೋರಿ ಗೆಸ್ಟ್ರಿಂಗ್ (13 ವರ್ಷ 268 ದಿನ) ಪದಕ ಗೆದ್ದಿದ್ದರು. ವಿಶೇಷವೆಂದರೆ, ಈ ಸ್ಪರ್ಧೆಯಲ್ಲಿ 13 ವರ್ಷದ ಇಬ್ಬರು ಬಾಲಕಿಯರು ಹಾಗೂ 16 ವರ್ಷದ ಮತ್ತೋರ್ವ ಬಾಲಕಿ ಭಾಗಿಯಾಗಿದ್ದರು.
ನಿಶಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಬ್ರೆಜಿಲ್ನ ರೈಸಾ ಲೀಲ್ ಬೆಳ್ಳಿ ಪದಕ ಗೆದ್ದಿದ್ದು, 16 ವರ್ಷದ ಬಾಲಕಿ ಕಂಚಿಕ ಪದಕ ದಕ್ಕಿಸಿಕೊಂಡಿದ್ದಾರೆ. ಮೊಮಿಜಿ ನಿಶಿಯಾ ಚಿನ್ನದ ಪದಕಕ್ಕೆ ಮುತ್ತಿಡುತ್ತಿದ್ದಂತೆ ಸಂತೋಷದಿಂದಲೇ ಕಣ್ಣೀರು ಹಾಕಿದರು.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಹೆಚ್ಚಿನ ನೋಟು ಮುದ್ರಣ ಮಾಡಲ್ಲ: ಸೀತಾರಾಮನ್
ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಬೇಕು ಎಂಬ ಉದ್ದೇಶದಿಂದಲೇ ಕಳೆದ 5 ವರ್ಷಗಳಿಂದ ಅಂದರೆ 8ನೇ ವಯಸ್ಸಿನಿಂದಲೇ ಮೊಮಿಜಿ ನಿಶಿಯಾ ಅಭ್ಯಾಸ ಆರಂಭಿಸಿದ್ದರು ಅನ್ನೋದು ಇಲ್ಲಿ ಗಮನಾರ್ಹ.