ಟೋಕಿಯೋ: ಜಾವಲಿನ್ ಥ್ರೋದಲ್ಲಿ ಭಾರತದ ಅಥ್ಲೀಟ್ಸ್ ನೀರಜ್ ಚೋಪ್ರಾ 87.58 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಫೈನಲ್‌ನಲ್ಲಿ ದಿಗ್ಗಜ ಆಟಗಾರರಿಗೆ ಮಣ್ಣು ಮುಕ್ಕಿಸಿದ್ದಾರೆ. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದಿದ್ದ ಚೋಪ್ರಾ, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ದೂರ ಎಸೆದರು. ಈ ಮೂಲಕ ದಿಗ್ಗಜರನ್ನೇ ಮೀರಿಸಿ, ಹೊಸ ದಾಖಲೆ ಬರೆದಿದ್ದಾರೆ.
ವಿಶ್ವದ ನಂಬರ್ 1 ಜಾವಲಿನ್ ಥ್ರೋ ಪಟುಗೆ ನಿರಾಸೆ
ಜಾವಲಿನ್ ಥ್ರೋದಲ್ಲಿ ವಿಶ್ವದ ನಂಬರ್.1 ಜಾವಲಿನ್ ಥ್ರೋ ಪಟು ಜೊಹಾನಸ್ ವೆಟ್ಟರ್ ಈ ಟೋಕಿಯೀ ಒಲಿಂಪಿಕ್ಸ್ನಲ್ಲಿ ನಿರಾಸೆ ಅನುಭವಿಸಿದ್ದಾರೆ.ಅಂತಿಮ 8ರ ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ವಿಫಲಗೊಂಡರು.
ವೈಯುಕ್ತಿಕ 96.29 ಮೀಟರ್ ದೂರ ಎಸೆದು ಗಮನ ಸೆಳೆದಿದ್ದ ವೆಟ್ಟರ್, ಈ ಸಲ ಚಿನ್ನದ ಪದಕ ಗೆಲ್ಲುವ ಅಥ್ಲೀಟ್ಸ್ ಎನಿಸಿಕೊಂಡಿದ್ದರು. ಆದರೆ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿ ನಿರಾಸೆ ಅನುಭವಿಸಿದರು. ವೆಟ್ಟರ್ ಗರಿಷ್ಠ 82 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು. ಆದರೆ ಭಾರತದ ನೀರಜ್, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ದೂರ ಎಸೆದು ಗಮನ ಸೆಳೆದರು.