ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನ ವೇಟ್ ಲಿಫ್ಟಿಂಗ್ನಲ್ಲಿ(ಭಾರ ಎತ್ತುವ ಸ್ಪರ್ಧೆ) ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಮೀರಾಬಾಯಿ ಚನು ಇದೀಗ ಭಾರತಕ್ಕೆ ಆಗಮಿಸಿದ್ದಾರೆ. ಜಪಾನ್ನಿಂದ ನೇರವಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸಾಧಕಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
ಚನು ಅವರಿಗೆ ಏರ್ಪೋರ್ಟ್ನಲ್ಲೇ ಆರ್ಟಿ-ಪಿಸಿಆರ್ ಪರೀಕ್ಷೆಗೊಳಪಡಿಸಲಾಯಿತು. ಇದಾದ ಬಳಿಕ ಬಿಗಿ ಭದ್ರತೆಯಲ್ಲಿ ಅವರನ್ನು ತವರಿಗೆ ಕಳುಹಿಸಿಕೊಡಲಾಗಿದೆ. 2000ರಲ್ಲಿ ನಡೆದಿದ್ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಇದಾದ ಬಳಿಕ ಮೀರಾಬಾಯಿ ಚನು ಈ ಸಾಧನೆ ಮಾಡಿದ್ದಾರೆ.
-
Manipur Government has decided to appoint Olympic Silver Medallist Saikhom Mirabai Chanu as Additional Superintendent of Police (Sports) in the police department: Chief Minister's Secretariat, Imphal
— ANI (@ANI) July 26, 2021 " class="align-text-top noRightClick twitterSection" data="
(File pic) pic.twitter.com/i7MWFKeFfG
">Manipur Government has decided to appoint Olympic Silver Medallist Saikhom Mirabai Chanu as Additional Superintendent of Police (Sports) in the police department: Chief Minister's Secretariat, Imphal
— ANI (@ANI) July 26, 2021
(File pic) pic.twitter.com/i7MWFKeFfGManipur Government has decided to appoint Olympic Silver Medallist Saikhom Mirabai Chanu as Additional Superintendent of Police (Sports) in the police department: Chief Minister's Secretariat, Imphal
— ANI (@ANI) July 26, 2021
(File pic) pic.twitter.com/i7MWFKeFfG
ಇದನ್ನೂ ಓದಿ: 13ನೇ ವಯಸ್ಸಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಾಲಕಿ!
ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಗೌರವ
ಬೆಳ್ಳಿ ಪದಕ ಗೆದ್ದು ಇತಿಹಾಸ ರಚನೆ ಮಾಡಿರುವ ಚನುಗೆ ಈಗಾಗಲೇ ಮಣಿಪುರ ಸರ್ಕಾರ 1 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕ್ರೀಡಾ ಕೋಟಾದಲ್ಲಿ ಅವರಿಗೆ ಹೆಚ್ಚುವರಿ ಪೊಲೀಸ್ ಅಧಿಕ್ಷಕಿ ಸ್ಥಾನ ನೀಡಲಾಗಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಈ ಮಾಹಿತಿ ಹೊರಹಾಕಿದ್ದಾರೆ.
'ಟೋಕಿಯೋ ಒಲಿಂಪಿಕ್ಸ್ ತುಂಬಾ ಸ್ಪರ್ಧಾತ್ಮಕವಾಗಿತ್ತು. ಆದರೆ ಪದಕ ಗೆಲ್ಲುವ ಇರಾದೆಯಿಂದ 2016ರಿಂದಲೂ ನಾನು ತಯಾರಿ ನಡೆಸಿದ್ದೆ. ಕಳೆದ 5 ವರ್ಷಗಳಿಂದ ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಅದರ ಫಲವಾಗಿ ಇದೀಗ ಪದಕ ಗೆದ್ದಿದ್ದೇನೆ.'
- ಮೀರಾಬಾಯಿ ಚನು, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ
ಪ್ರಧಾನಿ ಮೋದಿಗೆ ಧನ್ಯವಾದ:
-
Delhi | It was quite challenging. We started preparation in 2016 and changed the training pattern after Rio Olympics. We (Chanu & her coach) have dedicated the last 5 years to Tokyo Olympics: Olympics Silver medallist Mirabai Chanu to ANI#Tokyo2020 pic.twitter.com/1HItDNLhJY
— ANI (@ANI) July 26, 2021 " class="align-text-top noRightClick twitterSection" data="
">Delhi | It was quite challenging. We started preparation in 2016 and changed the training pattern after Rio Olympics. We (Chanu & her coach) have dedicated the last 5 years to Tokyo Olympics: Olympics Silver medallist Mirabai Chanu to ANI#Tokyo2020 pic.twitter.com/1HItDNLhJY
— ANI (@ANI) July 26, 2021Delhi | It was quite challenging. We started preparation in 2016 and changed the training pattern after Rio Olympics. We (Chanu & her coach) have dedicated the last 5 years to Tokyo Olympics: Olympics Silver medallist Mirabai Chanu to ANI#Tokyo2020 pic.twitter.com/1HItDNLhJY
— ANI (@ANI) July 26, 2021
ಅಭ್ಯಾಸ ನಡೆಸಲು ಯುಎಸ್ಗೆ ತೆರಳಲು ಕೊನೆಯ ಗಳಿಗೆಯಲ್ಲಿ ವಿಮಾನ ಮಿಸ್ ಆಗುವುದರಲ್ಲಿತ್ತು. ಈ ವೇಳೆ ಪ್ರಧಾನಿ ಮೋದಿಯವರು ನಮಗೆ ತೆರಳಲು ಎಲ್ಲ ರೀತಿಯ ಸಹಾಯ ಮಾಡಿದ್ದರು ಎಂದು ತಿಳಿಸಿದ್ದು, ಅವರಿಗೆ ಧನ್ಯವಾದ ಹೇಳಿದ್ದಾರೆ.