ಮೋನ್ಟ್ರಿಯಲ್( ಕೆನಡಾ) : ಪಂದ್ಯ ಆಡುವಾಗ ಗಾಯಗೊಂಡಿದ್ದ ಮಹಿಳಾ ಬಾಕ್ಸರ್ ಐದು ದಿನಗಳ ನಂತರ ಸಾವನ್ನಪ್ಪಿರುವ ಘಟನೆ ಕೆನಡಾದ ಮೋನ್ಟ್ರಿಯಲ್ನಲ್ಲಿ ನಡೆದಿದೆ. ಮೆಕ್ಸಿಕನ್ ಮಹಿಳಾ ಬಾಕ್ಸರ್ ಜಾನೆಟ್ ಜಕಾರಿಯಾಸ್ ಜಪಾಟಾ ಸಾವನ್ನಪ್ಪಿರುವ ಮಹಿಳಾ ಬಾಕ್ಸರ್.
ಶನಿವಾರ ರಾತ್ರಿ ಐಜಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 18 ವರ್ಷದ ಜಪಾಟಾ ತೀವ್ರವಾಗಿ ಗಾಯಗೊಂಡಿದ್ದರು. ಇವರು ಮೇರಿ-ಪಿಯರೆ ಜೊತೆಯ ಪಂದ್ಯದಲ್ಲಿ ಮೇರಿ ನೀಡಿದ್ದ ಬಲವಾದ ಪಂಚ್ನಿಂದ ಜಪಾಟ ಗಾಯಗೊಂಡು ರಿಂಗ್ನಲ್ಲಿಯೇ ಕುಸಿದು ಬಿದ್ದಿದ್ದರು.
ನಂತರ ಅವರನ್ನ ವೈದ್ಯಕೀಯ ತಂಡವು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗಿದೆ ಬಾಕ್ಸರ್ ಸಾವನ್ನಪ್ಪಿದ್ದಾರೆ ಎಂದು ಬಾಕ್ಸಿಂಗ್ ಸ್ಪರ್ಧೆಯನ್ನು ಆಯೋಜಿಸಿದ್ದ ಗ್ರೂಪ್ನ ಇವೊನೆ ಮಿಚೆಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಹೈಜಂಪ್ನಲ್ಲಿ ಪ್ರವೀಣ್ ಕುಮಾರ್ 'ಬೆಳ್ಳಿ'ತಾರೆ.. ಮೊದಲು ಆಟದ ನೈಪುಣ್ಯತೆಗೆ 'Google'ಗುರು..