ಭಿವಾನಿ(ಹರಿಯಾಣ): ಮಹಿಳೆಯರ 53 ಕೆಜಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸ್ವೀಡನ್‌ನ ಸೋಫಿಯಾ ಮ್ಯಾಗ್ಡಲೇನಾ ಮ್ಯಾಟ್ಸನ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ವಿನೇಶ್ ಪೋಗಟ್ ಬೆಲಾರಸ್ನ ಸ್ಪರ್ಧಿ ವಿರುದ್ಧ ಸೋಲು ಅನುಭವಿಸಿದ್ದು, ಇದರಿಂದ ಪದಕ ವಂಚಿತರಾಗಿದ್ದಾರೆ. ಆದರೆ, ಕ್ವಾರ್ಟರ್ ಫೈನಲ್ನಲ್ಲಿ ಗೆಲುವು ದಾಖಲು ಮಾಡಿರುವ ವೆನೆಸಾ ಫೈನಲ್‌ಗೆ ಪ್ರವೇಶ ಪಡೆದುಕೊಂಡರೆ ಪೋಗಟ್ ಕಂಚಿಗಾಗಿ ಸೆಣಸಾಟ ನಡೆಸಲಿದ್ದಾರೆ.
ವಿನೇಶ್ ಪೋಗಟ್ ಸೋಲಿನಿಂದ ಕುಟುಂಬಸ್ಥರು ನಿರಾಸೆಗೊಳಗಾಗಿದ್ದು, ಒಲಿಂಪಿಕ್ಸ್ನಲ್ಲಿ ಪದಕ ಗೆದ್ದು ತವರಿಗೆ ಮರಳುತ್ತಾಳೆಂಬ ಭರವಸೆ ಇಟ್ಟುಕೊಂಡಿದ್ದೆವು ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಈಟಿವಿ ಭಾರತ ಜೊತೆ ಮಾತನಾಡಿರುವ ವಿನೇಶ್ ಕುಟುಂಬಸ್ಥರು ತಮ್ಮ ಮನದಾಳ ಹೊರಹಾಕಿದ್ದಾರೆ.
ನಿನೇಶ್ ಪೋಗಟ್ ಅವರ ಚಿಕ್ಕಪ್ಪ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಷ್ಕೃತ ಮಹಾವೀರ್ ಸಿಂಗ್ ಪೋಗಟ್ ಮಾತನಾಡಿದ್ದು, ವಿದೇಶಿ ತರಬೇತುದಾರರಲ್ಲಿ ನನಗೆ ನಂಬಿಕೆ ಇಲ್ಲ. ಮುಂಬರುವ ಒಲಿಂಪಿಕ್ಸ್ಗಾಗಿ ಚಿನ್ನದ ಪದಕ ಗೆಲ್ಲಲು ನಾನೇ ವೈಯಕ್ತಿಕವಾಗಿ ತರಬೇತಿ ನೀಡುತ್ತೇನೆ ಎಂದಿದ್ದಾರೆ.
ಕಂಚಿಗಾಗಿ ವಿನೀಶ್ ಪೋಗಟ್ ಹೋರಾಟ ಸಾಧ್ಯತೆ
ಪ್ರೀ-ಕ್ವಾರ್ಟರ್‌ನಲ್ಲಿ ಸ್ವೀಡನ್‌ನ ಸೋಫಿಯಾ ಮಾಟ್ಸನ್ ವಿರುದ್ಧ ವಿನೇಶ್ 7-1ರಲ್ಲಿ ಗೆಲುವು ದಾಖಲಿಸಿದ್ದರು. ಆದರೆ, ಕ್ವಾರ್ಟರ್ ಫೈನಲ್ನಲ್ಲಿ ವೆನೆಸಾ ವಿರುದ್ಧ ಸೋಲು ಕಂಡಿದ್ದಾರೆ. ಇದೀಗ ವೆನೆಸಾ ಸೆಮಿಫೈನಲ್ನಲ್ಲಿ ಗೆಲುವು ದಾಖಲು ಮಾಡಿ ಫೈನಲ್‌ಗೆ ಪ್ರವೇಶ ಪಡೆದುಕೊಂಡರೆ ಪೋಗಟ್ ಪದಕದ ಆಸೆ ಮತ್ತೊಮ್ಮೆ ಚಿಗುರೊಡೆಯಲಿದೆ. ಈ ವೇಳೆ ಕಂಚಿನ ಪದಕಕ್ಕಾಗಿ ರಿಪೇಚ್ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಲಭ್ಯವಾಗಲಿದೆ.
ಇದನ್ನೂ ಓದಿರಿ: Tokyo Olympics Wrestling: ಕ್ವಾರ್ಟರ್ ಫೈನಲ್ನಲ್ಲಿ ಪರಾಭವಗೊಂಡ ವಿನೇಶ್ ಪೋಗಟ್