ETV Bharat / sports

ಬಯೋಪಿಕ್​ ಬಗ್ಗೆ ಯೋಚನೆ ಮಾಡಿಲ್ಲ: ಮುಂದಿನ ಬೇಟೆ ವಿಶ್ವ ಚಾಂಪಿಯನ್​ಶಿಪ್​ ಎಂದ ನೀರಜ್​ ಚೋಪ್ರಾ! - ವಿಶ್ವ ಚಾಂಪಿಯನ್​ಶಿಪ್

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ನೀರಜ್​ ಚೋಪ್ರಾ ಸಾಧನೆಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದರ ಮಧ್ಯೆ ಅವರ ಮುಂದಿನ ಯೋಜನೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದ್ದಾರೆ.

Neeraj Chopra
Neeraj Chopra
author img

By

Published : Aug 9, 2021, 4:03 PM IST

ಟೋಕಿಯೋ: 2020ರ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಹೆಸರು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತೆ ಮಾಡಿರುವ ನೀರಜ್​ ಚೋಪ್ರಾಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಾವಲಿನ್​ ಥ್ರೋದಲ್ಲಿ 87.58 ಮೀಟರ್ ಎಸೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದೀಗ ತಮ್ಮ ಮುಂದಿನ ಯೋಜನೆಗಳ ಕುರಿತು ಚಿನ್ನದ ಹುಡುಗ ಮಾಹಿತಿ ಹಂಚಿಕೊಂಡಿದ್ದಾರೆ.

ಚಿನ್ನದ ಪದಕಕ್ಕೆ ಮುತ್ತಿಕ್ಕಿರುವ ನೀರಜ್ ಚೋಪ್ರಾ ವಿಶ್ರಾಂತಿ ಪಡೆದುಕೊಳ್ಳುವ ಬದಲು ಮುಂದಿನ ಬೇಟೆಗಾಗಿ ಸಿದ್ಧರಾಗುವುದಾಗಿ ಹೇಳಿಕೊಂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್​​, ಕಾಮಲ್​ವೆಲ್ತ್​ ಗೇಮ್ಸ್​​​ ಹಾಗೂ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.

Neeraj Chopra
ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

ಮನಾದಳ ಬಿಚ್ಚಿ ಮಾತನಾಡಿದ ನೀರಜ್​

  • ಪ್ರಶ್ನೆ: ಅಥ್ಲೀಟ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದಿದ್ದೀರಿ, ಏನನ್ನಿಸುತ್ತಿದೆ?

ದೇಶಕ್ಕಾಗಿ ಮೊದಲ ಪದಕ ಗೆದ್ದಿರುವುದಕ್ಕೆ ಹೆಮ್ಮೆ ಇದೆ. ಅದು ಚಿನ್ನದ ಪದಕ ಗೆದ್ದಿರುವೆ. ಅಕ್ಷರಗಳಲ್ಲಿ ಇದರ ವರ್ಣನೆ ಅಸಾಧ್ಯ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ನಾನು ಚಿನ್ನದ ಪದಕ ಹಾಕಿಕೊಂಡು ವೇದಿಕೆ ಮೇಲೆ ನಿಂತಿದ್ದು ನಿಜಕ್ಕೂ ಅದ್ಭುತ ಕ್ಷಣಗಳಲ್ಲಿ ಒಂದಾಗಿದೆ. ಬರುವ ದಿನಗಳು ಭಾರತೀಯ ಅಥ್ಲೀಟ್ಸ್​ಗಳಿಗೆ ಉತ್ತಮವಾಗಿರುತ್ತವೆ ಎಂದಿದ್ದಾರೆ.

ಇದನ್ನೂ ಓದಿರಿ: ಮನಗೆದ್ದ ಗೋಲ್ ಕೀಪರ್​ ಶ್ರೀಜೇಶ್​ಗೆ 1 ಕೋಟಿ ರೂ. ನೀಡಿದ ದುಬೈ ಮೂಲದ ಉದ್ಯಮಿ!

  • ಪ್ರಶ್ನೆ: ಚಿನ್ನದ ಪದಕ ಮಿಲ್ಖಾ ಸಿಂಗ್​ಗೆ ಅರ್ಪಣೆ ಮಾಡಿದ್ದೀರಿ?

ನಾನು ಮಿಲ್ಖಾ ಸಿಂಗ್​ ಅವರ ಬಹಳಷ್ಟು ವಿಡಿಯೋ ನೋಡುತ್ತಿದ್ದೆ. ನಮ್ಮ ದೇಶದಿಂದ ಕ್ರೀಡಾಪಟುಗಳು ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿ ಅಥ್ಲೀಟ್ಸ್​ನಲ್ಲಿ ಪದಕ ಗೆಲ್ಲಬೇಕೆಂದು ಹೇಳುತ್ತಿದ್ದರು. ಅನೇಕ ಸಲ ಆ ಕನಸು ಕಂಡಿದ್ದಾಗಿ ತಿಳಿಸಿದ್ದಾರೆ. ಅವರ ಮಾತಿನಂತೆ ನಾನು ಸಾಧನೆ ಮಾಡಿದ್ದೇನೆ. ಈ ಸಲ ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದು, ರಾಷ್ಟ್ರಗೀತೆ ಪ್ರಸಾರವಾದಾಗ ನನಗೆ ತುಂಬಾ ಖುಷಿಯಾಯಿತು. ಜೊತೆಗೆ ಅವರ ಬಹುದಿನದ ಆಸೆ ಈಡೇರಿಸಿದ್ದಕ್ಕಾಗಿ ಈ ಚಿನ್ನ ಅವರಿಗೆ ಅರ್ಪಣೆ ಮಾಡಿದ್ದೇನೆ.

  • ಪ್ರಶ್ನೆ: ಫೈನಲ್​ನಲ್ಲಿ ನಿಮ್ಮ ಮನಸ್ಸಿನಲ್ಲಿ ಏನು ಓಡುತ್ತಿತ್ತು? ಚಿನ್ನ ಗೆದ್ದಿದ್ದೇನೆಂದು ನಿಮಗೆ ಅನಿಸಲು ಆರಂಭವಾಗಿದ್ದು ಯಾವಾಗ?

ಫೈನಲ್​ ಆರಂಭಗೊಂಡಾಗ ನನ್ನ ಕೈಯಿಂದ ಆದಷ್ಟು ಉತ್ತಮ ಪ್ರದರ್ಶನ ನೀಡಬೇಕೆಂಬುದು ನನ್ನ ಇರಾದೆಯಾಗಿತ್ತು. ಜಾವಲಿನ್ ಥ್ರೋ ತುಂಬಾ ಟೆಕ್ನಿಕಲ್​ ಆಟ, ಸಣ್ಣ ತಪ್ಪಾದರೂ ದೂರ ಕಡಿಮೆಯಾಗುತ್ತದೆ. ಎಲ್ಲರೂ ಮೊದಲ ಎಸೆತದ ನಂತರ ನನ್ನ ಸಂಭ್ರಮ ಆರಂಭಗೊಂಡಿತ್ತು.

  • ಪ್ರಶ್ನೆ: ಮೂರು ವರ್ಷಗಳ ಸತತ ಪ್ರಯತ್ನದಿಂದ ಈ ಪದಕ ಗೆದ್ದಿದ್ದೀರಿ, ಗಾಯಗೊಂಡು 2019ರ ಟೂರ್ನಿ ಕೂಡ ಮಿಸ್ ಮಾಡಿಕೊಂಡಿದ್ದೀರಿ? ತಯಾರಿ ಹೇಗಿತು?

2019 ಮತ್ತು 2020 ನನ್ನ ಪಾಲಿಗೆ ತುಂಬಾ ಕಠಿಣವಾಗಿತ್ತು. ಪ್ರತಿಯೊಬ್ಬ ಅಥ್ಲೀಟ್ಸ್​ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲಬೇಕು ಎಂದು ಪ್ರಯತ್ನ ಪಡುತ್ತಾರೆ. ಆದರೆ, ಕಳೆದ ಮೂರು ವರ್ಷಗಳಿಂದ ಇದಕ್ಕಾಗಿ ನಾನು ಕಠಿಣ ತರಬೇತಿ ಪಡೆದುಕೊಳ್ಳುತ್ತಿದ್ದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿರುವುದಕ್ಕೆ ತುಂಬಾ ಖುಷಿ ಇದೆ.

Neeraj Chopra
ಅಥ್ಲೀಟ್ಸ್ ನೀರಜ್​ ಚೋಪ್ರಾ
  • ಪ್ರಶ್ನೆ: ಫೈನಲ್​ ಆರಂಭಗೊಳ್ಳುವುದಕ್ಕೂ ಮುಂಚೆ ನಿಮ್ಮ ಕೋಚ್​ ಏನ್​ ಹೇಳಿದ್ರೂ? ಸ್ನೇಹಿತರು ಅಥವಾ ಕುಟುಂಬದೊಂದಿಗೆ ಮಾತನಾಡಿದ್ದೀರಾ?

ಫೈನಲ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಮ್ಮ ಕೋಚ್​ ಮೊದಲ ಪ್ರಯತ್ನದಲ್ಲೇ ಉತ್ತಮವಾಗಿ ಎಸೆ ಎಂದಿದ್ದರು. ಕ್ವಾಲಿಫೈಯರ್​​ ವೇಳೆ ಕೂಡ ನಾನು ಇದನ್ನೇ ಮಾಡಿದ್ದೇನು. ಜೊತೆಗೆ ನನ್ನ ಚಿಕ್ಕಪ್ಪ ಭೀಮ್​ ಚೋಪ್ರಾ ಜೊತೆ ಮಾತನಾಡಿದ್ದೆ ಎಂದರು.

  • ಪ್ರಶ್ನೆ: ಎರಡು ವರ್ಷಗಳಿಂದ ಕ್ಲಾಸ್ ಜೊತೆ ತರಬೇತಿ ಪಡೆಯುತ್ತಿದ್ದೀರಿ. ಅವರ ಪಾತ್ರ ಎಷ್ಟು ಪ್ರಮುಖವಾಗಿತ್ತು?

2019ರಿಂದಲೇ ಕ್ಲಾಸ್​ ಜೊತೆ ತರಬೇತಿ ಪಡೆಯುತ್ತಿದ್ದೇನೆ. ನಾನು ಪದಕ ಗೆಲ್ಲುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ನೀಡುವ ತರಬೇತಿ ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಟೆಕ್ನಿಕ್​ನಲ್ಲಿ ಸ್ವಲ್ಪ ಭಿನ್ನವಾಗಿದ್ದರೂ, ಅವರೊಂದಿಗೆ ತರಬೇತಿ ಆರಂಭಿಸಿದಾಗ ನನಗೆ ಸರಿಹೊಂದಿತು. ಅವರಿಗೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದರು.

  • ಪ್ರಶ್ನೆ: ಒಲಿಂಪಿಕ್ಸ್​ ವೇದಿಕೆ ಮೇಲೆ ನಿಂತು, ರಾಷ್ಟ್ರಗೀತೆ ಆಲಿಸಿದಾಗ ನಿಮ್ಮ ಭಾವನೆ ಹೇಗಿತ್ತು?

ಚಿನ್ನದ ಪದಕ ಗೆದ್ದು, ರಾಷ್ಟ್ರಧ್ವಜ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಕೇಳಿದಾಗ ನನ್ನ ಮನಸ್ಸಿಗೆ ನೆಮ್ಮದಿ ಅನಿಸಿತು. ಅದನ್ನ ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದನ್ನ ಅನುಭವಿಸಲು ಮಾತ್ರ ಸಾಧ್ಯ.

Neeraj Chopra
ನೀರಜ್​ ಚೋಪ್ರಾ ಸಂಭ್ರಮಾಚರಣೆ
  • ಪ್ರಶ್ನೆ: ನಿಮ್ಮ ಮುಂದಿನ ಗುರಿ ಏನು?

ಚಿನ್ನದ ಪದಕ ಗೆದ್ದಿದ್ದೇನೆ. ಮನೆಯಲ್ಲಿ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಬೇಕು. ತರಬೇತಿ ಪುನಾರಂಭ ಮಾಡಿ ಮುಂದಿನ ವರ್ಷದ ಏಷ್ಯನ್ ಗೇಮ್ಸ್​​, ಕಾಮಲ್​ವೆಲ್ತ್​ ಗೇಮ್ಸ್​​​ ಹಾಗೂ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗಬೇಕು ಎಂದರು.

ಪ್ರಶ್ನೆ: ನಿಮ್ಮ ಬಯೋಪಿಕ್​ನಲ್ಲಿ ನೀವೇ ನಟಿಸಬೇಕು ಎಂದು ಜನ ಹೇಳುತ್ತಿದ್ದಾರೆ. ನಿಮ್ಮ ಅಭಿಪ್ರಾಯ?

ಅದರ ಬಗ್ಗೆ ನಾನು ಹೆಚ್ಚು ಯೋಚಿಸಿಲ್ಲ. ಸದ್ಯಕ್ಕೆ ಆಟದ ಮೇಲೆ ಹಚ್ಚಿನ ಗಮನ. ನಾನು ಆಟ ಬಿಟ್ಟಾಗ ಬಯೋಪಿಕ್​ ಸೂಕ್ತವಾಗಿರುತ್ತದೆ. ಕ್ರೀಡೆಯಲ್ಲಿ ವೃತ್ತಿಜೀವನ ಮುಂದುವರೆಯುವವರೆಗೂ ಬಯೋಪಿಕ್​ ಬಗ್ಗೆ ಯೋಚಿಸುವುದಿಲ್ಲ ಎಂದರು. ಆದರೂ ನನ್ನ ಜೀವನ ಚರಿತ್ರೆಯಲ್ಲಿ ಅಕ್ಷಯ್ ಕುಮಾರ್​ ಅಥವಾ ರಂದೀಪ್ ಹೂಡಾ ಅಭಿನಯ ಮಾಡಲಿ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.