ಢಾಕಾ: ಮೂರು ಬಾರಿಯ ಏಷ್ಯನ್ ಚಾಂಪಿಯನ್ ಭಾರತ ತಂಡ ಜಪಾನ್ ವಿರುದ್ಧ ನಡೆದ ಪುರುಷರ ಏಷ್ಯನ್ ಚಾಂಪಿಯನ್ ಟ್ರೋಪಿ ಸೆಮಿಫೈನಲ್ನಲ್ಲಿ ಜಪಾನ್ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದೆ.
ಮಂಗಳವಾರ ಮೌಲಾನಾ ಭಾಸನಿ ಹಾಕಿ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮನ್ಪ್ರೀತ್ ಸಿಂಗ್ ಬಳಗ 3-5 ಗೋಲುಗಳ ಅಂತರದಲ್ಲಿ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿತು. ಹಾಲಿ ಚಾಂಪಿಯನ್ ಜಪಾನ್ ವಿರುದ್ಧ 6-0ಯಲ್ಲಿ ಗೆಲುವು ಸಾಧಿಸಿತ್ತು. ಆದರೆ, ಮಂಗಳವಾರ ಅದೇ ಪ್ರದರ್ಶನ ತೋರುವಲ್ಲಿ ವಿಫಲರಾದರು.
ಜಪಾನ್ ಪರ ರೈಕಿ ಫುಜಿಶಿಮಾ, ಶೋಟ ಯಮಡ, ಯೋಶಿಕಾ ಕಿರಿಶಿಟ, ಕೋಸ್ ಕವಾಬೆ ಮತ್ತು ರ್ಯೋಮ ಓಕಾ ಗೋಲುಗಳಿಸಿದರೆ, ಭಾರತದ ಪರ ಹಾರ್ದಿಕ್ ಸಿಂಗ್ 2 ಮತ್ತು ಹರ್ಮನ್ಪ್ರೀತ್ ಸಿಂಗ್ ಗೋಲು ಸಿಡಿಸಿ ಸೋಲಿನ ಅಂತರವನ್ನು ತಗ್ಗಿಸಿದರು. 2018ರ ಚಾಂಪಿಯನ್ ಪಾಕಿಸ್ತಾನ ದಕ್ಷಿಣ ಕೊರಿಯಾ ವಿರುದ್ಧ ನಡೆದ ರೋಚಕ ಸೆಮಿಫೈನಲ್ಸ್ನಲ್ಲಿ 5-6ರಲ್ಲಿ ಸೋಲು ಕಂಡಿತು.
ಇದನ್ನೂ ಓದಿ: South Africa vs India: ಕೋಚ್ ರಾಹುಲ್ ದ್ರಾವಿಡ್ ದಾಖಲೆ ಮೇಲೆ ವಿರಾಟ್ ಕೊಹ್ಲಿ ಕಣ್ಣು