ETV Bharat / sports

ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌: ಅಚಂತ ಶರತ್ ಕಮಲ್​ಗೆ ಸೋಲು - ಅಚಂತ ಶರತ್ ಕಮಲ್​ಗೆ ಸೋಲು

ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ತೈಪೆಯ ಲಿನ್ ಯುನ್ - ಜು ವಿರುದ್ಧ ಅಚಂತ ಶರತ್ ಕಮಲ್ ಸೋಲನ್ನು ಅನುಭವಿಸಿದರು.

ಶರತ್ ಕಮಲ್
Sharath Kamal
author img

By

Published : Mar 5, 2021, 10:22 AM IST

ದೋಹಾ: ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ತೈಪೆಯ ಲಿನ್ ಯುನ್-ಜು ವಿರುದ್ಧ ಅಚಂತ ಶರತ್ ಕಮಲ್ ಸೋಲು ಅನುಭವಿಸಿದರು.

ದೋಹಾದಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ (ಡಬ್ಲ್ಯುಟಿಟಿ) ಸ್ಪರ್ಧೆಯಲ್ಲಿ ವಿಶ್ವದ 32 ನೇ ಕ್ರಮಾಂಕದ ಶರತ್ 6-11, 4-11, 8-11 ಸೆಟ್​ಗಳ ಅಂತರದಲ್ಲಿ ವಿಶ್ವದ 7 ನೇ ಕ್ರಮಾಂಕದ ಚೀನಾದ ತೈಪೆಯ ಲಿನ್ ಯುನ್- ಜು ವಿರುದ್ಧ ಸೋತರು.

ಕೊರೊನಾ ಮಹಾಮಾರಿಯಿಂದಾಗಿ ಕಳೆದೊಂದು ವರ್ಷದ ವಿರಾಮದ ಬಳಿಕ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಆಡಿದ್ದು, ಉನ್ನತ ಶ್ರೇಣಿಯ ಯುನ್ ​ -ಜು ವಿರುದ್ಧ ಮೊದಲು ಉತ್ತಮ ಪ್ರದರ್ಶನವನ್ನು ನೀಡಿದರಾದರೂ ವೇಗವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಓದಿ: ಐಎಸ್ಎಸ್ಎಫ್ ವಿಶ್ವಕಪ್​ ಟೂರ್ನಿ: ಬೆಳ್ಳಿಗೆದ್ದ ಭಾರತ ಮಹಿಳಾ ಶೂಟರ್ಸ್​​​​ ತಂಡ

ಇದಕ್ಕೂ ಮೊದಲು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮಾನಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಕೂಡ ತಮ್ಮ ಅಂತಿಮ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸೋಲು ಅನುಭವಿಸಿದರು.

ಬಾತ್ರಾ ವಿಶ್ವದ 69 ನೇ ಕ್ರಮಾಂಕದ ಗನ್ನಾ ಗಪೋನೊವಾ ವಿರುದ್ಧ 5-11, 6-11, 14-12, 5-11ಅಂತರದಿಂದ ಸೋತರೆ, ಹಿಂದಿನ ಸುತ್ತಿನಲ್ಲಿ ಚಿಲಿಯ ವಿಶ್ವದ ನಂ .74 ವೆಗಾ ಪಾಲಿನಾ ಅವರ ವಿರುದ್ಧ 9-11, 11-5, 11-6, 6-11, 5-11ಸೆಟ್​ಗಳ ಅಂತರದಲ್ಲಿ ಸೋತರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.