ಲಂಡನ್: ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್‌ನ ಟೆನಿಸ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು 6-3, 6-7 (4/7), 6-3 ಅಂತರದಿಂದ ಮಣಿಸಿದ ಅಗ್ರ ಶ್ರೇಯಾಂಕಿತ ಆಶ್ಲಿ ಬಾರ್ಟಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇದು ಅವರ 2ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ
-
🏆 #Wimbledon | @ashbarty pic.twitter.com/JC25bcZp8X
— Wimbledon (@Wimbledon) July 10, 2021 " class="align-text-top noRightClick twitterSection" data="
">🏆 #Wimbledon | @ashbarty pic.twitter.com/JC25bcZp8X
— Wimbledon (@Wimbledon) July 10, 2021🏆 #Wimbledon | @ashbarty pic.twitter.com/JC25bcZp8X
— Wimbledon (@Wimbledon) July 10, 2021
ಆಸ್ಟ್ರೇಲಿಯಾದ ಇವೊನೆ ಗೂಲಾಗೊಂಗ್ ಕಾವ್ಲೆ ಅವರು ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡ 50ನೇ ವಾರ್ಷಿಕೋತ್ಸವದಂದೇ 25 ವರ್ಷದ ಆಸೀಸ್ ಆಟಗಾರ್ತಿ ಬಾರ್ಟಿ ಈ ಸಾಧನೆ ಮಾಡಿದ್ದಾರೆ. ಜತೆಗೆ ಕಳೆದ 41 ವರ್ಷಗಳಿಂದ ಆಸ್ಟ್ರೇಲಿಯಾ ಈ ಪ್ರಶಸ್ತಿಗೋಸ್ಕರ ಕಾಯುತ್ತಿತ್ತು. ಇದೀಗ ಅದರಲ್ಲಿ ಜಯ ಕಂಡಿದೆ.
1971ರಲ್ಲಿ ಕಾವ್ಲೆ ಅವರು ಪಾಲ್ಗೊಂಡಿದ್ದ ಪಂದ್ಯದ ಗೌರವಾರ್ಥವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪನ್ನು ಆ್ಯಶ್ಲಿ ಬಾರ್ಟಿ ಧರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಶಸ್ತಿ ಗೆದ್ದಿರುವುದು ಇವೊನೆ ಹೆಮ್ಮೆಪಡುವಂತೆ ಮಾಡಿರುವುದಾಗಿ ಭಾವಿಸುತ್ತೇನೆ ಎಂದು ಹೇಳಿದರು. 2019ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಬಾರ್ಟಿ ಚಾಂಪಿಯನ್ ಆಗಿದ್ದರು.