ಪ್ಯಾರಿಸ್: ಭಾನುವಾರ ನಡೆದ ಮ್ಯಾರಥಾನ್ ಫ್ರೆಂಚ್ ಓಪನ್ ಫೈನಲ್ನಲ್ಲಿ ಗ್ರೀಕ್ನ ಸ್ಟೆಫನೋಸ್ ಸಿಟ್ಸಿಪಾಸ್ ಅವರನ್ನು 5 ಸೆಟ್ಗಳ ಪಂದ್ಯದಲ್ಲಿ ಮಣಿಸಿ 19ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿದರು. ಈ ಮೂಲಕ ಎಲ್ಲ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳನ್ನು ತಲಾ 2 ಬಾರಿ ಗೆದ್ದಿರುವ ಸಕ್ರಿಯ ಟೆನಿಸ್ ಪಟು ಎಂಬ ದಾಖಲೆಗೆ ಜೋಕೊವಿಕ್ ಪಾತ್ರರಾದರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 6-7(6-8), 2-6 ರಲ್ಲಿ ಮೊದಲೆರಡು ಸೆಟ್ಗಳಲ್ಲಿ ಜೋಕೊವಿಕ್ ಸೋಲು ಕಂಡರು. ಆದರೆ, ಹೋರಾಟದ ಮನೋಭಾವ ಬಿಡದ ಜೋಕೊವಿಕ್ ಸತತ ಮೂರು ಸೆಟ್ಗಳನ್ನು 6-3, 6-2, 6-4 ರಲ್ಲಿ ಗೆದ್ದು ವೃತ್ತಿ ಜೀವನದ 19ನೇ ಗ್ರ್ಯಾಂಡ್ ಸ್ಲಾಮ್ ಮತ್ತು 2ನೇ ಫ್ರೆಂಚ್ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
-
This kid’s reaction when Djoker gives him his racket is everything pic.twitter.com/uc2mA1BXbv
— Will Brinson (@WillBrinson) June 13, 2021 " class="align-text-top noRightClick twitterSection" data="
">This kid’s reaction when Djoker gives him his racket is everything pic.twitter.com/uc2mA1BXbv
— Will Brinson (@WillBrinson) June 13, 2021This kid’s reaction when Djoker gives him his racket is everything pic.twitter.com/uc2mA1BXbv
— Will Brinson (@WillBrinson) June 13, 2021
ಆದರೆ, ಮೊದಲೆರಡು ಸೆಟ್ಗಳನ್ನು ಸೋಲು ಕಂಡಾಗಲೂ ಪುಟ್ಟ ಬಾಲಕನೊಬ್ಬ ಸರ್ಬಿಯನ್ ಸ್ಟಾರ್ರನ್ನು ಹುರಿದುಂಬಿಸುತ್ತಿದ್ದನು. ಪಂದ್ಯ ಪೂರ್ತಿ ತಮ್ಮನ್ನು ಬೆಂಬಲಿಸಿದ ಆ ಬಾಲಕನಿಗೆ ಈ ಪಂದ್ಯದಲ್ಲಿ ತಾವೂ ಉಪಯೋಗಿಸಿದ ರಾಕೆಟ್ ಅನ್ನು ಜೋಕೊವಿಕ್ ಆ ಬಾಲಕನಿಗೆ ಉಡುಗೊರೆ ನೀಡಿದರು. ಇದನ್ನು ನಂಬಲು ಸಾಧ್ಯವಿಲ್ಲ ಎನ್ನುವಂತೆ ಆ ಬಾಲಕ ಬಾವುಕನಾಗಿ ತಮ್ಮ ಕುಟುಂಬದವರ ಜೊತೆ ಸಂಭ್ರಮಿಸಿದ್ದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಇನ್ನು ಈ ಬಗ್ಗೆ ಮಾತನಾಡಿದ ಜೋಕೊವಿಕ್, ಆತನ ಧನಿ ನನಗೆ ಪಂದ್ಯ ಪೂರ್ತಿ ಕೇಳಿಸಿದೆ. ನಾನು ಎರಡು ಸೆಟ್ ಸೋತರು ಆತ ನನ್ನನ್ನು ಬೆಂಬಲಿಸುತ್ತಿದ್ದ. ಆತ ನನ್ನನ್ನು ಪ್ರೋತ್ಸಾಹಿಸುತ್ತಿದ್ದ, ಜೊತೆಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದ ಎಂದು ವಿಶ್ವದ ನಂ.1 ಆಟಗಾರ ತಿಳಿಸಿದ್ದಾರೆ.
ಅವನ ಮಾತು ನನಗೆ ತುಂಬಾ ಸೊಗಾಸಾಗಿತ್ತು. ಹಾಗಾಗಿ ಪಂದ್ಯದ ನಂತರ ಈ ರಾಕೆಟ್ ನೀಡಲು ಆತನೇ ಸೂಕ್ತ ವ್ಯಕ್ತಿ ಎಂದು ನನಗನಿಸಿತು. ಅಲ್ಲದೇ ನನ್ನ ಜೊತೆಗೆ ಕೊನೆಯವರೆಗೂ ನಿಂತು, ಬೆಂಬಲಿಸಿದಕ್ಕೆ ಇದು ನನ್ನ ಕೃತಜ್ಞತೆ ಎಂದು ನಾನು ಭಾವಿಸುತ್ತೇನೆ ಎಂದು ಜೋಕೊವಿಕ್ ಹೇಳಿಕೊಂಡಿದ್ದಾರೆ.
ಈ ಪ್ರಶಸ್ತಿಯೊಂದಿಗೆ ಜೋಕೊವಿಕ್ ಗರಿಷ್ಠ ಗ್ರ್ಯಾಂಡ್ಸ್ಲಾಮ್ಗಳನ್ನು ಗೆದ್ದ 2 ನೇ ಆಟಗಾರ ಎನಿಸಿಕೊಂಡರು. ರಾಫೆಲ್ ನಡಾಲ್ ಮತ್ತು ಫೆಡರರ್ ತಲಾ 20 ಗ್ರ್ಯಾಂಡ್ಸ್ಲಾಮ್ ಗೆದ್ದು ಅಗ್ರಸ್ಥಾನದಲ್ಲಿದ್ದಾರೆ.
ಇದನ್ನು ಓದಿ: French Open: 19ನೇ ಗ್ರ್ಯಾಂಡ್ ಸ್ಲಾಂ ಟ್ರೋಫಿಗೆ ಮುತ್ತಿಕ್ಕಿ ಸಂಭ್ರಮಿಸಿದ ಜೊಕೊವಿಕ್