ETV Bharat / sports

ಆಸ್ಟ್ರೇಲಿಯನ್ ಓಪನ್​: ಪುರುಷರ ಡಬಲ್ಸ್​ ಗೆದ್ದ ಡೊಡಿಗ್-ಪೋಲೆಸೆಕ್​ ಜೋಡಿ - ಡೊಡಿಗ್-ಪೋಲೆಸೆಕ್​ ಜೋಡಿ ಡಬಲ್ಸ್ ಚಾಂಪಿಯನ್​

ಡೊಡಿಗ್ ಮತ್ತು ಫಿಲಿಪ್ ಪೋಲೆಸೆಕ್ 6-3 6-4 ರ ನೇರ ಸೆಟ್​ಗಳ ಅಂತರದಲ್ಲಿ ಹಾಲಿ ಚಾಂಪಿಯನ್ ರಾಜೀವ್ ರಾಮ್ ಮತ್ತು ಜೋ ಸಾಲಿಸ್‌ಬರಿ ಅವರನ್ನು ಮಣಿಸುವ ಮೂಲಕ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.

ಆಸ್ಟ್ರೇಲಿಯನ್ ಓಪನ್ 2021
ಪುರುಷರ ಡಬಲ್ಸ್​ ಪ್ರಶಸ್ತಿ ಗೆದ್ದ ಡೊಡಿಗ್-ಪೋಲೆಸೆಕ್​ ಜೋಡಿ
author img

By

Published : Feb 21, 2021, 5:57 PM IST

ಮೆಲ್ಬೋರ್ನ್​: ರಾಡ್ ಲಾವರ್ ಅರೆನಾದಲ್ಲಿ ಭಾನುವಾರ ಮುಕ್ತಾಯಗೊಂಡ ಆಸ್ಟ್ರೇಲಿಯನ್ ಓಪನ್‌ ಪುರುಷರ ಡಬಲ್ಸ್​ ಫೈನಲ್​ನಲ್ಲಿ ಕ್ರೊವೇಷಿಯಾದ ಇವಾನ್ ಡೊಡಿಗ್ ಮತ್ತು ಸ್ಲೋವಾಕಿಯಾದ ಫಿಲಿಪ್ ಪೋಲೆಸೆಕ್ ಜೋಡಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಡೊಡಿಗ್ ಮತ್ತು ಫಿಲಿಪ್ ಪೋಲೆಸೆಕ್ 6-3, 6-4 ರ ನೇರ ಸೆಟ್​ಗಳ ಅಂತರದಲ್ಲಿ ಹಾಲಿ ಚಾಂಪಿಯನ್ ರಾಜೀವ್ ರಾಮ್ ಮತ್ತು ಜೋ ಸಾಲಿಸ್‌ಬರಿ ಅವರನ್ನು ಮಣಿಸುವ ಮೂಲಕ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.

ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್​ ಫೈನಲ್​

ಟೂರ್ನಿಯಲ್ಲಿ 9ನೇ ಶ್ರೇಯಾಂಕಿತ ಜೋಡಿ ಫೈನಲ್‌ ಪಂದ್ಯದಲ್ಲಿ 5ನೇ ಶ್ರೇಯಾಂಕದ ಜೋಡಿ ವಿರುದ್ಧ 1 ಗಂಟೆ 28 ನಿಮಿಷ ನಡೆದ ಪಂದ್ಯದಲ್ಲಿ ನೇರ ಸೆಟ್‌ಗಳಿಂದ ಮಣಿಸಿತು. ರಾಮ್ ಮತ್ತು ಸಾಲಿಸ್‌ಬುರಿ ಜೋಡಿ ಈ ಪಂದ್ಯವನ್ನು ಗೆದ್ದಿದ್ದರೆ, ಬ್ರಿಯಾನ್ ಸಹೋದರರ ನಂತರ ಸತತ ಎರಡು ಬಾರಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುರುಷ ಜೋಡಿ ಎಂಬ ಕೀರ್ತಿಗೆ ಭಾಜನರಾಗುತ್ತಿದ್ದರು. ಆದರೆ ಸೋಲಿನೊಂದಿಗೆ ನಿರಾಶೆಯನುಭವಿಸಿ ರನ್ನರ್​ ಅಪ್​ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.