ETV Bharat / sports

ಆಸ್ಟ್ರೇಲಿಯನ್ ಓಪನ್.. ಟಿಯಾಫೋ ಮಣಿಸಿ 3ನೇ ಸುತ್ತು ಪ್ರವೇಶಿಸಿದ ಜೋಕೊವಿಕ್.. - ಫ್ರಾನ್ಸಿಸ್​ ಟಿಯಾಫೋ ವಿರುದ್ಧ ಜೋಕೊವಿಕ್​ಗೆ ಗೆಲುವು

ಟಿಯಾಫೋ ನಾಲ್ಕನೇ ಸೆಟ್​ನಲ್ಲಿ ಸಮಯದ ಉಲ್ಲಂಘನೆ ಮಾಡಿದ್ದರಿಂದ ಸರ್ವ್​ ಕಳೆದುಕೊಂಡರು. ಹಾಗಾಗಿ, 4ನೇ ಸೆಟ್​ ಜೋಕೊವಿಕ್ ಗೆಲ್ಲುವ ಮೂಲಕ ಪಂದ್ಯವನ್ನು ಗೆದ್ದುಕೊಂಡರು. 3ನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯನ್ ಆಟಗಾರ ಅಮೆರಿಕಾದ ಟೇಲರ್​ ಫ್ರಿಟ್ಜ್​ ಅವರ ಸವಾಲನ್ನು ಎದುರಿಸಲಿದ್ದಾರೆ..

ಆಸ್ಟ್ರೇಲಿಯನ್ ಓಪನ್ 2021
ಆಸ್ಟ್ರೇಲಿಯನ್ ಓಪನ್ 2021
author img

By

Published : Feb 10, 2021, 4:06 PM IST

Updated : Feb 10, 2021, 4:11 PM IST

ಮೆಲ್ಬೋರ್ನ್ ​: ಅಗ್ರ ಶ್ರೇಯಾಂಕದ ನೊವಾಕ್ ಜೋಕೊವಿಕ್​ ಆಸ್ಟ್ರೇಲಿಯನ್​ ಓಪನ್​ನ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಫ್ರಾನ್ಸಿಸ್​ ಟಿಯಾಫೋ ವಿರುದ್ಧ ಜಯ ಸಾಧಿಸಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಟಿಯಾಫೋ ನಂಬರ್​ ಒನ್​ ಆಟಗಾರನಿಗೆ ತೀವ್ರ ಪೈಪೋಟಿ ನೀಡಿದರಾದರೂ ಚಾಂಪಿಯನ್​ ಆಟಗಾರನ ಮುಂದೆ ಮೂರುವರೆ ಗಂಟೆ ನಡೆದ ಪಂದ್ಯದಲ್ಲಿ ಸೋಲು ಕಂಡರು. ಜೋಕೊವಿಕ್​ 6-3, 6-7 (3), 7-6 (2), 6-3 ಅಂತರದಿಂದ ಮಣಿಸಿದರು.

ನೊವಾಕ್ ಜೋಕೊವಿಕ್​ ಗೆಲುವಿನ ಆಟ..

ಮೊದಲ ಸೆಟ್​ನ ಸುಲಭವಾಗಿ ಗೆದ್ದ ಜೋಕೊವಿಕ್​​ಗೆ ಎರಡನೇ ಸೆಟ್​ನಲ್ಲಿ ತೀವ್ರ ಪೈಪೋಟಿ ನೀಡಿ ಟ್ರೈಬ್ರೇಕರ್​ನಲ್ಲಿ ಟಿಯೋಫೋಗೆ ಶರಣಾದರು. ಮತ್ತೆ ಮೂರನೇ ಸುತ್ತು ಕೂಡ ಟ್ರೈ ಬ್ರೇಕರ್​ ತಲುಪಿತ್ತಾದರೂ, ಜೋಕೊವಿಕ್​ ಗೆಲುವು ಸಾಧಿಸಿದರು.

ಟಿಯಾಫೋ ನಾಲ್ಕನೇ ಸೆಟ್​ನಲ್ಲಿ ಸಮಯದ ಉಲ್ಲಂಘನೆ ಮಾಡಿದ್ದರಿಂದ ಸರ್ವ್​ ಕಳೆದುಕೊಂಡರು. ಹಾಗಾಗಿ, 4ನೇ ಸೆಟ್​ ಜೋಕೊವಿಕ್ ಗೆಲ್ಲುವ ಮೂಲಕ ಪಂದ್ಯವನ್ನು ಗೆದ್ದುಕೊಂಡರು. 3ನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯನ್ ಆಟಗಾರ ಅಮೆರಿಕಾದ ಟೇಲರ್​ ಫ್ರಿಟ್ಜ್​ ಅವರ ಸವಾಲನ್ನು ಎದುರಿಸಲಿದ್ದಾರೆ.

8 ಬಾರಿ ಚಾಂಪಿಯನ್ ಆಟಗಾರ ಈ ಹಿಂದೆ ಒಮ್ಮೆ ಮಾತ್ರ 2ನೇ ಸುತ್ತಿನಲ್ಲಿ ಹೊರಬಿದ್ದಿದ್ದಾರೆ, ಅವರು 2017ರಲ್ಲಿ ಡೆನಿಸ್​ ಇಸ್ಟೋಮಿನ್ ವಿರುದ್ದ ಸೋಲು ಕಂಡಿದ್ದರು.

ಇದನ್ನು ಓದಿ:2021ರ ಆಸ್ಟ್ರೇಲಿಯನ್ ಓಪನ್‌: ಮೂರನೇ ಸುತ್ತಿಗೆ ಲಗ್ಗೆ ಇಟ್ಟ ಸೆರೆನಾ ವಿಲಿಯಮ್ಸ್

Last Updated : Feb 10, 2021, 4:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.