ಲಂಡನ್: ಕೆನಡಾದ ಟೆನಿಸ್ ತಾರೆ ಬಿಯಾಂಕಾ ಆಂಡ್ರೆಸ್ಕು 6-2, 6-1ರ ಅಂತರದಲ್ಲಿ ಫ್ರಾನ್ಸ್ನ ಅಲೈಸ್ ಕಾರ್ನೆಟ್ ಸೋಲಿಸಿ ಮೂರನೇ ಸುತ್ತನ್ನು ಪ್ರವೇಶಿಸಿದ್ದಾರೆ. ಎರಡನೇ ವೈಲ್ಡ್ ಬೆಲಾರಸ್‌ನ ಆರ್ಯನಾ ಸಬಲೆಂಕಾ, ಬ್ರಿಟನ್ನ ವೈಲ್ಡ್ಕಾರ್ಡ್ ಕೇಟೀ ಬೌಟ್ಲರ್ ಅವರನ್ನು ಮಣಿಸಿದ್ದಾರೆ.
ವಿಶ್ವದ 4ನೇ ಕ್ರಮಾಂಕದಲ್ಲಿರುವ ಆರ್ಯನಾ, ಕೇಟಿಯ ವಿರುದ್ಧ ಜಯಭೇರಿ ಬಾರಿಸಿದರು. 3 ನೇ ಶ್ರೇಯಾಂಕಿತ ಆಟಗಾರ್ತಿ ಉಕ್ರೇನ್‌ನ ಎಲೀನಾ ಸ್ವಿಟೋಲಿನಾ ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ಅಲಿಸನ್ ವ್ಯಾನ್ ಉಯ್ಟ್ವಾಂಕ್ರನ್ನು ಸೋಲಿಸಿದರು. ಎಲೀನಾ 6-3, 2-6, 6-3ರಿಂದ ಜಯ ಗಳಿಸಿದರು.
16 ನೇ ಶ್ರೇಯಾಂಕದ ಅನಸ್ತಾಸಿಯಾ ಪಾವ್ಲಿಯುಚೆಂಕೋವಾ ಮತ್ತು 19 ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಮೊದಲ ಸುತ್ತಿನ ಪಂದ್ಯಗಳಲ್ಲಿ ಗೆದ್ದಿದ್ದಾರೆ. ರಷ್ಯಾದ ಅನಸ್ತಾಸಿಯಾ 6-2, 6-2ರಿಂದ ರೊಮೇನಿಯಾದ ಅನಾ ಬೊಗ್ಡಾನ್ ಅವರನ್ನು ಸೋಲಿಸಿದರೆ, ಕರೋಲಿನಾ 6-3, 6-3ರಿಂದ ಚೀನಾದ ಜಾಂಗ್ ಶೂಯಿ ಅವರನ್ನು ಸೋಲಿಸಿದರು.
ವಿಂಬಲ್ಡನ್‌ನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಮೊದಲ ಉಕ್ರೇನಿಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎಲೀನಾ, ಅಲಿಸನ್ ಅವರನ್ನು ಸೋಲಿಸಲು ಒಂದು ಗಂಟೆ 41 ನಿಮಿಷಗಳನ್ನು ತೆಗೆದುಕೊಂಡರು.
ಪಂದ್ಯದ ಬಳಿಕ ಮಾತನಾಡಿದ ಎಲಿನಾ, ಇದೊಂದು ಅಭೂತಪೂರ್ವಗಳಿಗೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ನಾನು ಬಹಳ ಕೂಲ್ಆಗಿ, ಉತ್ತಮವಾಗಿ ಆಡಿದೆ. ನಾನು ಬಾಲ್ಅನ್ನು ಟ್ರ್ಯಾಕ್ ಮಾಡಿದ ರೀತಿ ಚೆನ್ನಾಗಿತ್ತು. ಹಾಗಾಗಿ ನಾನು ಗೆದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.