ನ್ಯೂಯಾರ್ಕ್: ಭಾರತದ ಅಗ್ರಮಾನ್ಯ ಟೆನ್ನಿಸ್ ಆಟಗಾರ ಸುಮಿತ್ ನಗಲ್ ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಯುಎಸ್ ಓಪನ್‌ನ ಮೊದಲ ಸುತ್ತಿನಲ್ಲಿ ನಗಲ್ ಯುಎಸ್ಎನ ಬ್ರಾಡ್ಲಿ ಕ್ಲಾನ್ ಅವರನ್ನು 6-1, 6-3, 3-6, 6-1 ಸೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಿದರು.
ಈ ಫಲಿತಾಂಶದೊಂದಿಗೆ 23 ವರ್ಷದ ನಗಲ್ ಕಳೆದ ಏಳು ವರ್ಷಗಳಲ್ಲಿ ಗ್ರ್ಯಾಂಡ್ಸ್ಲಾಮ್ನಲ್ಲಿ ಸಿಂಗಲ್ಸ್ ಮುಖ್ಯ ಡ್ರಾ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2013ರಲ್ಲಿ ಸೋಮದೇವ್ ದೇವವರ್ಮನ್ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಎರಡನೇ ಸುತ್ತನ್ನು ತಲುಪಿದ್ದರು.
ವಿಶ್ವದ 122ನೇ ಕ್ರಮಾಂಕದಲ್ಲಿರುವ ನಾಗಲ್ ಈಗ ಯುಎಸ್ ಓಪನ್‌ನ ಎರಡನೇ ಸುತ್ತಿನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅಥವಾ ಸ್ಪೇನ್‌ನ ಜೌಮ್ ಮುನಾರ್ ಅವರನ್ನು ಎದುರಿಸಲಿದ್ದಾರೆ.