ಹೈದರಾಬಾದ್ : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ -19 ಸೋಂಕಿಗೊಳಗಾದ ನಂತರ ಪ್ರತ್ಯೇಕ ಕ್ವಾರಂಟೈನ್ ಇರಲು ಸೈನಾ ನೆಹ್ವಾಲ್ ನಿರ್ಧರಿಸಿದ್ದಾರೆ.
ವಿಶ್ವ ಶ್ರೇಯಾಂಕದಲ್ಲಿ 20ನೇ ಸ್ಥಾನದಲ್ಲಿರುವ ಸೈನಾ, ಥಾಯ್ಲೆಂಡ್ ಓಪನ್ ಟೂರ್ನಿ ಆಡಲು ಸಂಪೂರ್ಣ ಸಿದ್ಧರಾಗಿದ್ದರು. ಕೊರೊನಾ ಕಾಣಿಸಿದ ಪರಿಣಾಮ ಈಗ ಅವರನ್ನು ಪಂದ್ಯಾವಳಿಯಿಂದ ಹಿಂದೆ ಸರಿಯುವಂತೆ ಕೇಳಿಕೊಳ್ಳಲಾಗಿದೆ.
ಸೋಮವಾರ ಪರೀಕ್ಷೆ ನಡೆಸಲಾಗಿತ್ತು. ಇಂದು ಸೈನಾಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ಸೈನಾ ಅವರು ತಮಗೆ ಕೊರೊನಾ ಸೋಂಕು ತಗುಲಿರುವುದನ್ನ ಖಚಿತ ಪಡಿಸಿದ್ದಾರೆ. ಜತೆಗೆ ಕ್ವಾರಂಟೈನಲ್ಲಿರುವುದಾಗಿ ನಿರ್ಧರಿಸಿದ್ದೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಓದಿ : ಸ್ಮಿತ್ ವಿಕೃತಿ ಬಗ್ಗೆ ಸೆಹ್ವಾಗ್ ಮಾರ್ಮಿಕ ಉತ್ತರ: ಶೂಗಳನ್ನು ಅನೇಕ ವಿಷಯಗಳಿಗೆ ಬಳಸಬಹುದು, ಗಾರ್ಡ್ ಒರೆಸಲು ಸಹ
ಸೈನಾ ನೆಹ್ವಾಲ್ ಜೊತೆಗೆ ಕೋವಿಡ್ -19 ಪರೀಕ್ಷೆಗೆ ಹೆಚ್ ಎಸ್ ಪ್ರಣಾಯ್ ಸಹ ಒಳಪಟ್ಟಿದ್ದಾರೆ. ಪ್ರಣಾಯ್ ಸಹ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.