ಹಾಲೆ(ಜರ್ಮನಿ): ವಿಶ್ವದ 8ನೇ ಶ್ರೇಯಾಂಕದ ರೋಜರ್ ಫೆಡರರ್ ಹಾಲೆಯಲ್ಲಿ ನಡೆಯುತ್ತಿರುವ ಎಟಿಪಿ ಗ್ರ್ಯಾಸ್ ಕೋರ್ಟ್ ಟೂರ್ನಮೆಂಟ್ನಲ್ಲಿ 2ನೇ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಸ್ವಿಸ್ ಸ್ಟಾರ್ 20 ವರ್ಷದ 21 ಶ್ರೇಯಾಂಕಿತ ಫೆಲಿಕ್ಸ್ ಆಗುರ್ ಅಲಿಯಾಸಿಮ್ ವಿರುದ್ಧ 4-6, 6-3, 6-2 ಸೆಟ್ಗಳ ಅಂತರದಲ್ಲಿ ಸೋಲು ಕಂಡರು.
ವಿಂಡಲ್ಡನ್ ಟೂರ್ನಿಯ ಪೂರ್ವಭಾವಿಯಾಗಿ ಈ ಟೂರ್ನಿಯಲ್ಲಿ ಭಾಗವಹಿಸಿದ್ದ ರೋಜರ್ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ್ದರು. ಆದರೆ, 2ನೇ ಸುತ್ತಿನಲ್ಲಿ ಕೆನಡಾ ಆಟಗಾರನ ವಿರುದ್ಧ ಅನಿರೀಕ್ಷಿತ ಸೋಲನುಭವಿಸಿ ನಿರಾಸೆ ಅನುಭವಿಸಿದರು. ಫ್ರೆಂಚ್ ಓಪನ್ನಲ್ಲಿ 3ನೇ ಸುತ್ತು ಪ್ರವೇಶಿಸಿದ್ದ 20 ಗ್ರ್ಯಾಂಡ್ಸ್ಲಾಮ್ ವಿಜೇತ ನಾಲ್ಕನೇ ಸುತ್ತಿನಿಂದ ತಾವಾಗಿಯೇ ಹಿಂದೆ ಸರಿದಿದ್ದರು.
ಫೆಡರರ್ ಅಲ್ಲದೇ ಟೂರ್ನಿಯಲ್ಲಿ ನಂಬರ್ 1 ಶ್ರೇಯಾಂಕದ ಪಡೆದಿದ್ದ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲು ಕಂಡಿದ್ದರು. ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಮತ್ತು ರಷ್ಯಾದ ರುಬ್ಲೆವ್ ಮಾತ್ರ ಟೂರ್ನಿಯಲ್ಲಿ ಉಳಿದಿ ಟಾಪ್ 10 ಶ್ರೇಯಾಂಕದ ಆಟಗಾರರಾಗಿದ್ದಾರೆ.
ಇದನ್ನು ಓದಿ: ಐಪಿಎಲ್ ವೇಳೆ ರೋಹಿತ್ಗೆ ಬೆದರಿಕೆಯೊಡ್ಡಿದ್ದಾರಂತೆ ಬೌಲ್ಟ್