ನವದೆಹಲಿ : ಭಾರತೀಯ ಟೆನ್ನಿಸ್ ಆಟಗಾರ ಸುಮಿತ್ ನಗಾಲ್ ಟೂರ್ನಿ ಆರಂಭವಾಗುವ ಏಳು ದಿನಗಳ ಮೊದಲು, ಶುಕ್ರವಾರ Tokyo Olympicsನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸುಮಿತ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೆಲ ಕ್ರೀಡಾಪಟುಗಳು ಕೋವಿಡ್ ಹಿನ್ನೆಲೆ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆ ಕಾರಣಕ್ಕೆ ಕಟ್ ಆಫ್ ಮಿತಿಯನ್ನು ಕಡಿಮೆ ಮಾಡಲಾಗಿದೆ. ಹಾಗಾಗಿ, ಸುಮಿತ್ ನಗಾಲ್ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ ಎಂದು ಆಲ್ ಇಂಡಿಯನ್ ಟೆನ್ನಿಸ್ ಆಸೋಶಿಯೇಶನ್ (ಏಐಟಿಎ) ಪ್ರಧಾನ ಕಾರ್ಯದರ್ಶಿ ಅನಿಲ್ ಧೂಪರ್ ತಿಳಿಸಿದ್ದಾರೆ.
ಓದಿ :'ಒಲಿಂಪಿಕ್ಸ್‌ನಲ್ಲಿ ಆಡುವುದು ಬಾಲ್ಯದ ಕನಸು; ಅಗ್ರ ಶ್ರೇಯಾಂಕಿತರನ್ನು ಮಣಿಸುವುದೇ ನನ್ನ ಗುರಿ'
ಆಟಗಾರರು ಟೂರ್ನಿಯಿಂದ ಹಿಂದೆ ಸರಿದ ಕಾರಣ ಸುಮಿತ್ ಅರ್ಹತೆ ಪಡೆದಿದ್ದಾರೆ. ಈ ಬಗ್ಗೆ ನಾವು ಒಲಿಂಪಿಕ್ಸ್ ಸಮಿತಿಯಿಂದ E-Mail ಸ್ವೀಕರಿಸಿದ್ದೇವೆ. ಸುಮಿತ್ಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಸಮಯ ಬಹಳ ಕಡಿಮೆ ಇದ್ದು, ಅದಕ್ಕನುಗುಣವಾಗಿ ನಾವು ಕೆಲಸ ಮಾಡಬೇಕಿದೆ ಎಂದು ಧೂಪರ್ ಹೇಳಿದ್ದಾರೆ.
ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಬಗ್ಗೆ 23 ವರ್ಷದ ಸುಮಿತ್ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದು, ನಾನು ಈಗ ಯಾವ ಫೀಲ್ನಲ್ಲಿದ್ದೇನೆ ಎಂಬುವುದನ್ನು ತಿಳಿಸಲು ಪದಗಳು ಸಾಲುತ್ತಿಲ್ಲ. ನಿಮ್ಮೆಲ್ಲರ ಬೆಂಬಲ ಮತ್ತು ಹಾರೈಕೆಗೆ ಧನ್ಯವಾದಗಳು ಎಂದಿದ್ದಾರೆ.
-
No words can express my emotions. A surreal feeling to qualify for the Tokyo Olympics. Grateful to all your support and wishes. pic.twitter.com/TyauJUBKBk
— Sumit Nagal (@nagalsumit) July 16, 2021 " class="align-text-top noRightClick twitterSection" data="
">No words can express my emotions. A surreal feeling to qualify for the Tokyo Olympics. Grateful to all your support and wishes. pic.twitter.com/TyauJUBKBk
— Sumit Nagal (@nagalsumit) July 16, 2021No words can express my emotions. A surreal feeling to qualify for the Tokyo Olympics. Grateful to all your support and wishes. pic.twitter.com/TyauJUBKBk
— Sumit Nagal (@nagalsumit) July 16, 2021
ಕೋವಿಡ್ ಆತಂಕದ ನಡುವೆ ಜಪಾನ್ನ ಟೋಕಿಯೋ ನಗರದಲ್ಲಿ 2021 ಜುಲೈ 23 ರಿಂದ ಆಗಸ್ಟ್ 8ವರೆಗೆ 2021 ರ ಒಲಿಂಪಿಕ್ಸ್ ಟೂರ್ನಿ -20 ನಡೆಯಲಿದೆ.