ETV Bharat / sports

ಆರ್ಥಿಕ ವ್ಯವಸ್ಥೆ ಬಲಪಡಿಸಲು ಸ್ಥಳೀಯ ಬ್ರಾಂಡ್​ಗಳಿಗೆ ಪ್ರಾಧಾನ್ಯತೆ ನೀಡಿ: ಸಾನಿಯಾ ಮನವಿ - ಪ್ರಧಾನಿ ನರೇಂದ್ರ ಮೋದಿ

ಜೀವನ ಶಾಶ್ವತವಾಗಿ ಬದಲಾಗಿದೆ ಎಂದು ನಮಗೆ ತಿಳಿದಿದೆ. ಇದನ್ನು ನಿವಾರಿಸಲು ನಮ್ಮ ಜನರು ಮತ್ತು ನಮ್ಮ ದೇಶವನ್ನು ವೈರಸ್​ನ ನಂತರದ ದಿನಗಳಲ್ಲಿ ಪುನರುಜ್ಜೀವನಗೊಳಿಸಲು ಸಹಾಯ ಮಾಡುವ ಏಕೈಕ ಮಾರ್ಗ ಎಂದರೆ ನಮ್ಮ ಸ್ಥಳೀಯ ಬ್ರಾಂಡ್​ಗಳನ್ನು ಬೆಂಬಲಿಸಬೇಕು ಎಂದು ಸಾನಿಯಾ ಸಲಹೆ ಜೊತೆ ಮನವಿಯನ್ನೂ ಮಾಡಿದ್ದಾರೆ.

Sania Mirza encourages local brands in India
ಸಾನಿಯಾ ಮಿರ್ಜಾ
author img

By

Published : Jun 2, 2020, 11:55 AM IST

Updated : Jun 2, 2020, 12:22 PM IST

ಮುಂಬೈ: ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಕಳೆದೆರಡು ತಿಂಗಳಿನಿಂದ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ಇದರಿಂದ ಭಾರತದ ಆರ್ಥಿಕ ವ್ಯವಸ್ಥೆ ಪಾತಾಳ ಸೇರಿದೆ. ಇಂತಹ ಸಂದರ್ಭದಲ್ಲಿ ದೇಶದ ಆರ್ಥಿಕತೆ ಸುಧಾರಿಸಲು ಸ್ಥಳೀಯ ಬ್ರಾಂಡ್​ಗಳಿಗೆ ಉತ್ತೇಜನ ನೀಡಿ ಎಂದು ಟೆನಿಸ್​​​​​ ಸ್ಟಾರ್​ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಭಾರತದಲ್ಲಿ ತಯಾರಾಗುವ ವಸ್ತುಗಳಿಗೆ ಪ್ರಾಧಾನ್ಯತೆ ನೀಡಿ ಎಂದು ಸಾನಿಯಾ ತಮ್ಮ ಇನ್ಸ್​​​​ಸ್ಟಾಗ್ರಾಂ​ನಲ್ಲಿ #SupportSmallBySania ಎಂಬ ಹ್ಯಾಶ್​​​ ಟ್ಯಾಗ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

‘ದೇಶವೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಾನು ಸಮಾಜಕ್ಕೆ ಏನಾದರೂ ಹಿಂತಿರುಗಿಸಲು ಬಯಸಿದ್ದೇನೆ. ಹೀಗಾಗಿ ಬ್ರಾಂಡ್ಸ್, ಡಿಸೈನರ್ಸ್​, ಕ್ರಾಫ್ಟ್​ಮನ್​, ಪ್ರಾಪರ್ಟಿ, ರೆಸ್ಟೋರೆಂಟ್ಸ್, ಮೊದಲಾಗಿ ಭಾರತದಲ್ಲಿ ತಯಾರಾಗುವ ಯಾವುದಾರೂ ಸರಿ. ನನಗೆ ನಿಮ್ಮ ಸಂಪೂರ್ಣ ಮಾಹಿತಿಯನ್ನು ಇಮೇಲ್​ ಮಾಡಿ, ಇದರಲ್ಲಿ ನನಗಿಷ್ಟವಾದ 20 ಬ್ಯಾಂಡ್​ಗಳ ಬಗ್ಗೆ ನನ್ನ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

Sania Mirza encourages local brands in India
ಸಾನಿಯಾ ಮಿರ್ಜಾ

ಜೀವನ ಶಾಶ್ವತವಾಗಿ ಬದಲಾಗಿದೆ ಎಂದು ನಮಗೆ ತಿಳಿದಿದೆ. ಇದನ್ನು ನಿವಾರಿಸಲು ನಮ್ಮ ಜನರು ಮತ್ತು ನಮ್ಮ ದೇಶವನ್ನು ವೈರಸ್​ನ ನಂತರ ದಿನದಲ್ಲಿ ಪುನರುಜ್ಜೀವನಗೊಳಿಸಲು ಸಹಾಯ ಮಾಡುವ ಏಕೈಕ ಮಾರ್ಗ ಎಂದರೆ ನಮ್ಮ ಸ್ಥಳೀಯ ಬ್ರಾಂಡ್​ಗಳನ್ನು ಬೆಂಬಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕೂಡ ದೇಶದ ಜನತೆ ಸ್ವಾವಲಂಬಿಗಳಾಗಬೇಕು. ವಿದೇಶಿ ಬಂಡವಾಳವನ್ನು ಸ್ವಾಗತಿಸಬೇಕು ಹಾಗೂ ಪೂರೈಕೆ ಸರಪಳಿಯನ್ನು ಬಲಪಡಿಸಬೇಕು. ಪ್ರತಿಯೊಬ್ಬ ಭಾರತೀಯನು ಸ್ಥಳೀಯ ವಸ್ತುಗಳನ್ನು ಉತ್ತೇಜಿಸಬೇಕು ಎಂದು ಕೇಳಿಕೊಂಡಿದ್ದಾರೆ.

Last Updated : Jun 2, 2020, 12:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.