ETV Bharat / sports

ATP Finals semis: ಆಂಡ್ರೆ ರುಬ್ಲೆವ್ ಮಣಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ​ ಕಾಸ್ಪರ್​ ರೂಡ್ - ನೊವಾಕ್ ಜೊಕೊವಿಕ್

ಎಟಿಪಿ ಫೈನಲ್​ ಸೆಮಿ(ATP Finals semis)ಗೆ ನಾರ್ವೇಜಿಯನ್​ನ ಕ್ಯಾಸ್ಪರ್​ ರೂಡ್​ ಅರ್ಹತೆ ಪಡೆದಿದ್ದು, ಇಂದು ಸಂಜೆ ಅಮೆರಿಕದಲ್ಲಿ ನಡೆಯಲಿರುವ ಸೆಮಿ ಫೈನಲ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮೆಡ್ವೆಡೆವ್​ರನ್ನು ಎದುರಿಸಲಿದ್ದಾರೆ.

Casper Ruud in semifinal  ATP Finals  ATP Finals semis  Novak Djokovic  ಸೆಮಿಫೈನಲ್​ಗೆ ಲಗ್ಗೆಯಿಟ್ಟ​ ಕಾಸ್ಪರ್​ ರೂಡ್  ಎಟಿಪಿ ಫೈನಲ್ಸ್​ ಎಟಿಪಿ ಫೈನಲ್ಸ್​ ಸೆಮಿಸ್​ ನೊವಾಕ್ ಜೊಕೊವಿಕ್
ಆಂಡ್ರೆ ರುಬ್ಲೆವ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ​ ಕಾಸ್ಪರ್​ ರೂಡ್
author img

By

Published : Nov 20, 2021, 1:23 PM IST

ಟುರಿನ್: ಎಟಿಪಿ ಫೈನಲ್ಸ್​ಗೆ ಅಂತಿಮ ಅರ್ಹತಾ(ATP Finals semis) ಆಟಗಾರನಾಗಿ 22 ವರ್ಷದ ನಾರ್ವೇಜಿಯನ್ ಕಾಸ್ಪರ್​ ರೂಡ್​ ಅರ್ಹತೆ ಪಡೆದಿದ್ದಾರೆ. ಈಗಾಗಲೇ ನಂ.1 ಆಟಗಾರ ನೊವಾಕ್ ಜೊಕೊವಿಕ್, ಡೇನಿಯಲ್ ಮೆಡ್ವೆಡೆವ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ಜೊತೆ ನಾರ್ವೇಜಿಯನ್​ನ​ ರೂಡ್​ ಎಲೈಟ್ ಸೀಸನ್ ಎಂಡಿಂಗ್ ಈವೆಂಟ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ನಿರ್ಣಾಯಕ ಪಂದ್ಯದಲ್ಲಿ ರೂಡ್ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಶುಕ್ರವಾರ ತನ್ನ ಅಂತಿಮ ರೌಂಡ್​​ನಲ್ಲಿ ಆಂಡ್ರೆ ರುಬ್ಲೆವ್ ವಿರುದ್ಧ 2-6, 7-5, 7-6 (5) ಸೆಟ್​ಗಳ ಮೂಲಕ ಗೆಲುವು ದಾಖಲಿಸಿದರು. ಈ ಗೆಲುವಿನ ಮೂಲಕ ಕೊನೆಯ ನಾಲ್ಕರಲ್ಲಿ ಅನಿರೀಕ್ಷಿತ ಸ್ಥಾನವನ್ನು ಗಿಟ್ಟಿಸಿಕೊಂಡರು.

​ರುಬ್ಲೆವ್ ತಮ್ಮ ಹಿಂದಿನ ನಾಲ್ಕು ಪಂದ್ಯಗಳಲ್ಲಿ ರೂಡ್ ಅವರನ್ನು ಸೋಲಿಸಿದ್ದರು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ರೂಡ್​ ವಿರುದ್ಧ ಸೋಲನ್ನಪ್ಪಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಪಂದ್ಯದಲ್ಲಿ ಅಂಕ ಪಡೆಯಲು ಸಾಧ್ಯ ಮಾಡಿದ ನನ್ನ ತೋಳುಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಏಕೆಂದರೆ ನಾನು ತುಂಬಾ ನರ್ವಸ್ ಆಗಿದ್ದೆ. ನಾಲ್ಕನೇ ವ್ಯಕ್ತಿಯಾಗಿ ಹೊರ ಹೊಮ್ಮಿದ್ರೂ ಸಹ ನಾನು ವಿಶ್ವದ ನಾಲ್ಕನೇ ಅತ್ಯುತ್ತಮ ಆಟಗಾರ ಎಂದು ಪರಿಗಣಿಸುವುದಿಲ್ಲ ಅಂತಾ ರೂಡ್ ಪಂದ್ಯ ಮುಗಿದ ಬಳಿಕ ಹೇಳಿದರು.

ಅಮೆರಿಕನ್ನರ ಕಾಲಮಾನ ಪ್ರಕಾರ ಇಂದು ಸಂಜೆ 6.30ಕ್ಕೆ U.S. ಓಪನ್ ಚಾಂಪಿಯನ್ ಮತ್ತು ಹಾಲಿ ಚಾಂಪಿಯನ್ ಮೆಡ್ವೆಡೆವ್​ರನ್ನು ರೂಡ್ ಎದುರಿಸಲಿದ್ದಾರೆ. ಜೊಕೊವಿಕ್ ಮತ್ತು ಜ್ವೆರೆವ್ ಶನಿವಾರದ ಇನ್ನೊಂದು ಸೆಮಿಫೈನಲ್‌ನಲ್ಲಿ ಎದುರಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.