ಸಿಡ್ನಿ: ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಗಿಂತ ಮುಂಚಿತವಾಗಿ ತಮ್ಮ ಸಹ ಸ್ಪರ್ಧಿಗಳು ಕೊರೊನಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಫೆಲ್ ನಡಾಲ್ ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯಾಕ್ಕೆ ಆಗಮಿಸುವ ಎಲ್ಲಾ ಆಟಗಾರರು ತಮ್ಮ ಸಿಬ್ಬಂದಿಯೊಂದಿಗೆ ಎರಡು ವಾರಗಳ ಕ್ವಾರಂಟೈನ್ಗೆ ಒಳಗಾಗಬೇಕು. ಇಲ್ಲಿಯವರೆಗೆ, ಒಂಬತ್ತು ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಕಂಡು ಬಂದಿತ್ತು. ಕಳೆದ ವಾರ, ಕೆಲವು ಆಟಗಾರರು ಕ್ವಾರಂಟೈನ್ನಲ್ಲಿದ್ದ ಕಾರಣ ಈವೆಂಟ್ ನಡೆಸಲು ಸರಿಯಾದ ತರಬೇತಿ ನೀಡಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ನಡಾಲ್ ಸಹ ಸ್ಪರ್ಧಿಗಳಿಗೆ ಮನವಿ ಮಾಡಿದ್ದು, "ಕೊರೊನಾ ನಡುವೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದೆಯೂ ಈ ದೇಶದಲ್ಲಿ ಆಡುವ ಅವಕಾಶ ಸಿಗಲಿದೆ" ಎಂದಿದ್ದಾರೆ.
"ಕ್ವಾರಂಟೈನ್ನಲ್ಲಿರುವವರ ಬಗ್ಗೆ ನನಗೆ ತುಂಬಾ ವಿಷಾದವಿದೆ. ಆದರೆ ಆಸ್ಟ್ರೇಲಿಯಾಗೆ ಬಂದಾಗ, ಇಲ್ಲಿನ ಕ್ರಮಗಳು ಕಟ್ಟುನಿಟ್ಟಾಗಿರುತ್ತವೆ ಎಂದು ನಮಗೆ ತಿಳಿದಿತ್ತು. ಏಕೆಂದರೆ ಈ ದೇಶವು ಕೊರೊನಾ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇದು ವಿಭಿನ್ನವಾದ ಪರಿಸ್ಥಿತಿ. ಇಲ್ಲಿ ನಮಗೆ ನಮಗೆ ಇಲ್ಲಿ ಆಡಲು ಅವಕಾಶ ಸಿಗಲಿದೆ. ಜಗತ್ತು ಕೊರೊನಾದಿಂದ ಬಳಲುತ್ತಿದೆ. ಆದ್ದರಿಂದ ನಾವು ದೂರು ನೀಡಲು ಸಾಧ್ಯವಿಲ್ಲ" ಎಂದಿದ್ದಾರೆ.