ETV Bharat / sports

ಆಸ್ಟ್ರೇಲಿಯಾ ಓಪನ್: ವಿಮಾನದಲ್ಲಿ ಆಗಮಿಸಿದ ನಾಲ್ವರಲ್ಲಿ ಕೋವಿಡ್ ಸೋಂಕು.. 72 ಆಟಗಾರರು ಕ್ವಾರಂಟೈನ್​ - ವಿಮಾನದಲ್ಲಿ ಆಗಮಿಸಿದ ನಾಲ್ವರಲ್ಲಿ ಕೋವಿಡ್ ಸೋಂಕು

ಮೂರು ವಿಮಾನಗಳಲ್ಲಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ ಕೆಲವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ನಿಕಟ ಸಂಪರ್ಕ ಎಂದು ಪರಿಗಣಿಸಿ 72 ಆಟಗಾರರನ್ನು 14 ದಿನಗಳ ಕಾಲ ತಮ್ಮ ಹೋಟೆಲ್ ಕೋಣೆಗಳಲ್ಲಿ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ.

Players forced into hard quarantine ahead of Australian Open
ಆಸ್ಟ್ರೇಲಿಯಾ ಓಪನ್
author img

By

Published : Jan 18, 2021, 10:49 AM IST

ಸಿಡ್ನಿ: ಆಸ್ಟ್ರೇಲಿಯಾದ ಓಪನ್‌ಗೆ ಮುಂಚಿತವಾಗಿ ವಿಶ್ವದ ಅಗ್ರ ಟೆನಿಸ್ ಆಟಗಾರರಿಗೆ ಕಟ್ಟುನಿಟ್ಟಾಗಿ ಎರಡು ವಾರಗಳ ಕಾಲ ಹೋಟೆಲ್ ಕ್ಯಾರಂಟೈನ್‌ಗೆ ಒತ್ತಾಯಿಸಲಾಗಿದೆ. ಟೂರ್ನಿಗಾಗಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ ಚಾರ್ಟರ್ಡ್ ವಿಮಾನಗಳಲ್ಲಿ ಕನಿಷ್ಠ ನಾಲ್ವರು ಪ್ರಯಾಣಿಕರು ಕೋವಿಡ್ -19 ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ.

ಮೂರು ವಿಮಾನಗಳಲ್ಲಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ ಕೆಲವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ನಿಕಟ ಸಂಪರ್ಕ ಎಂದು ಪರಿಗಣಿಸಿ 72 ಆಟಗಾರರನ್ನು 14 ದಿನಗಳ ಕಾಲ ತಮ್ಮ ಹೋಟೆಲ್ ಕೋಣೆಗಳಲ್ಲಿ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ.

ಸೋಂಕು ಪತ್ತೆಯಾದವರ ಪೈಕಿ ಆಟಗಾರರಿಲ್ಲ, ವಿಮಾನ ಹತ್ತುವುದಕ್ಕೂ ಮೊದಲು ಎಲ್ಲರೂ ಕೂಡ ನೆಗೆಟಿವ್ ವರದಿ ಪಡೆದುಕೊಂಡಿದ್ದರು ಎಂದು ಆಸ್ಟ್ರೇಲಿಯಾ ಓಪನ್ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 8ರಿಂದ ಪ್ರಾರಂಭವಾಗುವ ಟೂರ್ನಿಗೆ ಕೇವಲ ಮೂರು ವಾರಗಳ ಕಾಲಾವಕಾಶವಿದ್ದು, ಕ್ವಾರಂಟೈನ್​ ಸಮಯದಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗದಿರುವುದಕ್ಕೆ ಕೆಲ ಆಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.