ಮೆಲ್ಬೊರ್ನ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯನ್ ಓಪನ್ಸ್ ಪುರುಷರ ಸಿಂಗಲ್ಸ್ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೀಯಾದ ಡೊಮಿನಿಕ್ ಥೀಮ್ನ್ನು 5 ಸೆಟ್ಗಳ ಅಂತರದಿಂದ ಸೋಲಿಸಿ ಸರ್ಬಿಯಾದ ನೊವಾಕ್ ಜೊಕೊವಿಕ್ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
4 ಗಂಟೆಗಳ ತೀವ್ರ ಪೈಪೋಟಿಯ ಬಳಿಕ ಜೊಕೊವಿಕ್ ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ತಮ್ಮ ಕರಿಯರ್ನಲ್ಲಿ ಅವರು 17ನೇ ಗ್ರ್ಯಾಂಡ್ ಸ್ಲಾಮ್ ಮತ್ತು ಮೆಲ್ಬೊರ್ನ್ ಅಂಗಳದಲ್ಲಿ 8ನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.