ಮೆಲ್ಬೋರ್ನ್: ಜಪಾನಿನ ಪವರ್‌ಹೌಸ್ ನವೋಮಿ ಒಸಾಕಾ ಅವರು, 27ನೇ ಶ್ರೇಯಾಂಕಿತ ಟುನೀಶಿಯಾದ ಓನ್ಸ್ ಜಬೂರ್ ಅವರನ್ನು 6-3, 6-2 ನೇರ ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯನ್ ಓಪನ್ನ ನಾಲ್ಕನೇ ಸುತ್ತಿಗೆ ಪ್ರವೇಶಿಸಿದರು.
ಫೆ.14ರಂದು ನಡೆಯಲಿರುವ ನಾಲ್ಕನೇ ಸುತ್ತಿನ ಸ್ಪರ್ಧೆಯಲ್ಲಿ 2019ರ ಚಾಂಪಿಯನ್ ಒಸಾಕಾ ಅವರು, 2020ರ ಫೈನಲಿಸ್ಟ್ ಮತ್ತು ಸ್ಪಾನಿಷ್ ಆಟಗಾರ್ತಿ ಗಾರ್ಬೈನ್ ಮುರ್ಗುರುಜಾ ಅವರನ್ನು ಎದುರಿಸಲಿದ್ದಾರೆ.