ETV Bharat / sports

ಆಸ್ಟ್ರೇಲಿಯನ್ ಓಪನ್: 3ನೇ ಸುತ್ತು ಪ್ರವೇಶಿಸಿದ ರಾಫೆಲ್ ನಡಾಲ್​ - ಆಸ್ಟ್ರೇಲಿಯನ್ ಓಪನ್​

ವಿಶ್ವದ 2ನೇ ಶ್ರೇಯಾಂಕದ ನಡಾಲ್ ಕ್ವಾಲಿಫೈಯರ್ ಮೂಲಕ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಮೈಕಲ್ ಮೊಹ್​ ವಿರುದ್ಧ 6-1,6-4,6-2 ನೇರ ಸೆಟ್​ಗಳ ಅಂತರದಿಂದ ಪ್ರಾಬಲ್ಯಯುತ ಗೆಲುವು ಸಾಧಿಸಿದರು.

ಆಸ್ಟ್ರೇಲಿಯನ್ ಓಪನ್
ರಾಫೆಲ್ ನಡಾಲ್​
author img

By

Published : Feb 11, 2021, 8:01 PM IST

ಮೆಲ್ಬೋರ್ನ್​: ಸ್ಪೇನಿನ ಸ್ಟಾರ್​ ಟೆನ್ನಿಸ್​ ಆಟಗಾರ ರಾಫೆಲ್​ ನಡಾಲ್ ಗುರುವಾರ ನಡೆದ ಆಸ್ಟ್ರೇಲಿಯನ್ ಓಪನ್​ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಮೈಕಲ್ ಮೊಹ್ ವಿರುದ್ಧ ವಿರುದ್ಧ ಜಯ ಸಾಧಿಸಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ವಿಶ್ವದ 2ನೇ ಶ್ರೇಯಾಂಕದ ನಡಾಲ್ ಕ್ವಾಲಿಫೈಯರ್ ಮೂಲಕ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಮೈಕಲ್ ಮೊಹ್​ ವಿರುದ್ಧ 6-1,6-4,6-2 ನೇರ ಸೆಟ್​ಗಳ ಅಂತರದಿಂದ ಪ್ರಾಬಲ್ಯಯುತ ಗೆಲುವು ಸಾಧಿಸಿದರು.

2009ರಲ್ಲಿ ತಮ್ಮ ಏಕೈಕ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ನಡಾಲ್​ ತಮ್ಮ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೆ ರೋಜರ್ ಫೆಡರರ್​(20) ಜೊತೆ ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಗೆದ್ದಿರುವ ವಿಶ್ವ ದಾಖಲೆ ಹೊಂದಿರುವ ನಡಾಲ್​ ಈ ಗ್ರ್ಯಾಂಡ್​ಸ್ಲಾಮ್ ಗೆದ್ದರೆ ಪುರುಷರ ಸಿಂಗಲ್ಸ್​ನಲ್ಲಿ ಹೆಚ್ಚು ಗ್ರ್ಯಾಂಡ್​ಸ್ಲಾಮ್​ ಗೆದ್ದ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಇದನ್ನು ಓದಿ:ವಿಶ್ವ ಪ್ಯಾರಾ ಅಥ್ಲೀಟ್ ಗ್ರ್ಯಾಂಡ್ ಪ್ರಿಕ್ಸ್‌​​​: ಮೊದಲ ದಿನವೇ ಸ್ವರ್ಣ ಗೆದ್ದ ದೇವೇಂದರ್​, ನಿಮಿಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.