ETV Bharat / sports

ಎಟಿಪಿ ಫೈನಲ್ಸ್​​: ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿದ ರಷ್ಯಾದ ಡ್ಯಾನಿಲ್​ ಮೆಡ್ವೆಡೆವ್ - five-time champion Novak Djokovic and World No. 2 Rafael Nadal

ಡೇನಿಯಲ್​​​​ ಮೆಡ್ವೆಡೆವ್ ​​​​ ಹಾಗೂ ಸೆಮಿ ಫೈನಲ್​​ ಪಂದ್ಯದಲ್ಲಿ ವಿಶ್ವದ ಅಗ್ರ ಆಟಗಾರರಾದ ನೋವಾಕ್​​​ ಜೋಕೊವಿಕ್​​​ ಹಾಗೂ ರಾಫೆಲ್ ನಡಾಲ್​ ವಿರುದ್ಧ ಜಯ ಕಂಡಿದ್ದರು. ಈ ಮೂಲಕ ವಿಶ್ವ ಶ್ರೇಯಾಂಕಿತ ಅಗ್ರ ಮೂರು ಸ್ಥಾನ ಪಡೆದ ಆಟಗಾರರನ್ನು ಸೋಲಿಸಿ ಈ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೆ ಡೇನಿಲ್ ಭಾಜನರಾಗಿದ್ದಾರೆ.

Russian Medildev
ರಷ್ಯಾದ ಡೇನಿಲ್ ಮೆಡ್ವೆಡೆವ್
author img

By

Published : Nov 24, 2020, 9:32 AM IST

Updated : Feb 23, 2021, 12:36 PM IST

ಲಂಡನ್​: ಎಟಿಪಿ ಫೈನಲ್ಸ್​​ನ ಕೊನೆಯ ಪಂದ್ಯದಲ್ಲಿ ಯುಎಸ್​​ ಓಪನ್ಸ್ ಫೈನಲಿಸ್ಟ್​​​ ಡೊನಮಿಕ್ ಥೀಮ್ ಹಾಗೂ ಡ್ಯಾನಿಲ್​ ಮೆಡ್ವೆಡೆವ್ ನಡುವಿನ ರೋಚಕ ಪಂದ್ಯದಲ್ಲಿ ಮೆಡ್ವೆಡೆವ್​​ ಭರ್ಜರಿ ಜಯದಾಖಲಿಸಿ ಎಟಿಪಿ ಪ್ರಶ್ತಸಿ ಮುಡಿಗೇರಿಸಿಕೊಂಡಿದ್ದಾರೆ.

ಮೆಡ್ವೆಡೆವ್ ತಮ್ಮ​ ವೃತ್ತಿಜೀವನದ ಅತ್ಯಂತ ಶ್ರೇಷ್ಠ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಈ ಮೂಲಕ ಪ್ರಶಸ್ತಿಗಾಗಿ ಗ್ರೂಪ್​ ಪಂದ್ಯದಲ್ಲಿ ಘಟಾನುಘಟಿಗಳ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ದ ಡೊನಮಿಕ್ ವಿರುದ್ಧ ರೋಚಕ ಜಯ ದಾಖಲಿಸಿ ಚೊಚ್ಚಲ ಎಟಿಪಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಪಂದ್ಯದ ಮೊದಲ ಸುತ್ತಿನಲ್ಲಿ ಡೊನಮಿಕ್ ಗೆಲುವು ಪಡೆದು ಉತ್ತಮ ಆರಂಭ ಪಡೆದಿದ್ದರು. ಆದರೆ ನಂತರದ ಎರಡು ಸೆಟ್​ಗಳಲ್ಲಿ ಡೇನಿಲ್​ ಕಮ್​ ಬ್ಯಾಕ್ ಮಾಡಿ 4-6, 7-6, 6-4ರ ಸೆಟ್​​​​ನಿಂದ ಗೆಲುವು ಪಡೆದರು.

ಇದಕ್ಕೂ ಮೊದಲು ಲೀಗ್​​​​​ ಹಾಗೂ ಸೆಮಿಫೈನಲ್​​ ಪಂದ್ಯದಲ್ಲಿ ವಿಶ್ವದ ಅಗ್ರ ಆಟಗಾರರಾದ ನೋವಾಕ್​​​ ಜೋಕೊವಿಕ್​​​ ಹಾಗೂ ರಾಫೆಲ್ ನಡಾಲ್​ ವಿರುದ್ಧ ಜಯ ಕಂಡಿದ್ದರು. ಈ ಮೂಲಕ ವಿಶ್ವ ರ‍್ಯಾಂಕಿಂಗ್​​ನ ಅಗ್ರ ಮೂರು ಸ್ಥಾನ ಪಡೆದಿದ್ದ ಆಟಗಾರರನ್ನು ಸೋಲಿಸಿ ಈ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೆ ಡೇನಿಯಲ್ ಭಾಜನರಾದರು.

ಈ ಮೂಲಕ 2021ರ ಗ್ರ್ಯಾಂಡ್​​ ಸ್ಲ್ಯಾಮ್ ಪ್ರಶಸ್ತಿ ಪಡೆಯುವ ಯುವಪಡೆಯಲ್ಲಿ ಡೇನಿಯಲ್​ ಮೆಡ್ವೆಡೆವ್ ಸಹ ಪ್ರಮುಖರು ಎನಿಸಿಕೊಂಡಿದ್ದಾರೆ.

Last Updated : Feb 23, 2021, 12:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.