ದೋಹಾ: ದೋಹಾದಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್ ಸಿರೀಸ್ ಟೇಬಲ್ ಟೆನಿಸ್ ಪಂದ್ಯಾವಳಿಯ ಎರಡನೇ ಸುತ್ತಿಗೆ ಭಾರತದ ಮಾನಿಕಾ ಬಾತ್ರಾ ಮತ್ತು ಸತ್ಯನ್ ಜ್ಞಾನಶೇಖರನ್ ಲಗ್ಗೆ ಇಟ್ಟಿದ್ದಾರೆ.
ಮಹಿಳಾ ಸಿಂಗಲ್ಸ್ನಲ್ಲಿ 63 ನೇ ರ್ಯಾಂಕಿಂಗ್ ಹೊಂದಿರುವ ಮಾನಿಕಾ 3-0 ಸೆಟ್ಗಳಿಂದ ಚೀನಾದ ತೈಪೆಯ ಹ್ಸೀನ್-ಟಿಜಿ ಚೆಂಗ್ ಅವರನ್ನು ಮಣಿಸಿದರು. 11-5, 11-9, 11-9 ರಿಂದ ನೇರ ಸೆಟ್ಗಳಲ್ಲಿ ಎದುರಾಳಿಯನ್ನ ಸುಲಭವಾಗಿ ಮಣಿಸಿದರು. 2018 ರ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಜಪಾನಿನ ವಿಶ್ವದ 3 ನೇ ಶ್ರೇಯಾಂಕದ ಮಿಮಾ ಇಟೊ ಅವರನ್ನ ಮುಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.
ಇನ್ನೂ 37 ನೇ ಶ್ರೇಯಾಂಕಿತ ಜ್ಞಾನಶೇಖರನ್ ಫ್ರಾನ್ಸ್ನ 40 ನೇ ಶ್ರೇಯಾಂಕದ ಎಮ್ಯಾನುಯೆಲ್ ಲೆಬೆಸನ್ ವಿರುದ್ಧ 3-2ರಿಂದ ಸೆಟ್ಗಳಿಂದ ಪ್ರಯಾಸದ ಗೆಲವು ಸಾಧಿಸಿದ್ದಾರೆ. ಜ್ಞಾನಶೇಖರನ್ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಂಡರು. ಆದರೆ, ನಂತರ 3 ಸೆಟ್ಗಳನ್ನ ಗೆದ್ದು ಪಂದ್ಯವನ್ನ ತಮ್ಮದಾಗಿಸಿಕೊಂಡಿದ್ದಾರೆ. ಮಂಗಳವಾರ 16 ರ ಸುತ್ತಿನಲ್ಲಿ ಜಪಾನಿನ ವಿಶ್ವದ 5 ನೇ ಶ್ರೇಯಾಂಕದ ಹರಿಮೊಟೊ ಟೊಮೊಕಾಜು ಅವರನ್ನು ಎದುರಿಸಲಿದ್ದಾರೆ.
ಓದಿ : WTT ಸೀರಿಸ್ : ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ ಮನಿಕಾ ಬಾತ್ರಾ, ಹರ್ಮೀತ್ ದೇಸಾಯಿ