ನವದೆಹಲಿ: ಟೋಕಿಯೋ ಒಲಂಪಿಕ್ಸ್ಗೆ ಕೆಲವೇ ವಾರಗಳು ಉಳಿದಿದ್ದು, ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಸಿದ್ಧತೆ ಕುರಿತು ಮಾತನಾಡಿರುವ ಅವರು, ಒಲಂಪಿಕ್ನಲ್ಲಿ ಪ್ರತಿಸ್ಪರ್ಧಿಗಳ ಎದುರಿಸಲು ಹೊಸ ತಂತ್ರಗಳು ಮತ್ತು ಕೌಶಲ್ಯಗಳ ತಿಳಿಯಲು ಮುಂದಾಗಿದ್ದೇನೆ ಎಂದಿದ್ದಾರೆ.
ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆಗೆ ಕೊರೊನಾ ಲಾಕ್ಡೌನ್ ಬಿಡುವಿನ ವೇಳೆಯಲ್ಲಿ ತನ್ನ ಆಟದ ತಪ್ಪುಗಳನ್ನು ತಿದ್ದುಕೊಳ್ಳಲು ಅಗತ್ಯ ಸಮಯ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಪಿ ವಿ ಸಿಂಧುಗೆ ತೀವ್ರ ಪೈಪೋಟಿ ನೀಡುತ್ತಿದ್ದ ಕರೋಲಿನಾ ಮರಿನ್ ಗಾಯದ ಸಮಸ್ಯೆಯಿಂದ ಒಲಂಪಿಕ್ನಿಂದ ಹೊರಬಿದ್ದಿದ್ದಾರೆ. ಆದರೆ, ಅವರಿಗೆ ಇನ್ನಷ್ಟು ಕಠಿಣ ಸವಾಲು ಎದುರಾಗುವ ಸಾಧ್ಯತೆಯೂ ಇದೆ.
ಈ ಕುರಿತು ಮಾತನಾಡಿ. ‘ಒಬ್ಬ ಆಟಗಾರ ಮಾತ್ರ ಈಗ ಮೈದಾನದಿಂದ ಹೊರಗುಳಿದಿದ್ದಾರೆ. ಆದರೆ, ತೈ ತ್ಸು ಯಿಂಗ್, ರತ್ಚಾನೋಕ್ ಇಂಟಾನನ್, ಒಕುಹರಾ ಮತ್ತು ಯಮಗುಚಿ ಎಂತಹ ಆಟಗಾರರು ಸಹ ಇದ್ದಾರೆ. ಹೀಗಾಗಿ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ರತ್ಚಾನೋಕ್ ಇಂಟಾನನ್ ಅತ್ಯಂತ ಕೌಶಲ್ಯಯುಕ್ತ ಆಟಗಾರ್ತಿ ಆಕೆಯ ಕುರಿತು ಹೆಚ್ಚು ಗಮನಹರಿಸಬೇಕಿದೆ’ ಎಂದಿದ್ದಾರೆ
ಇದಕ್ಕೂ ಮುನ್ನಾ ಸಿಂಧು 2016ರ ಒಲಿಂಪಿಕ್ಸ್ ಫೈನಲ್ ಮತ್ತು 2017ರ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಮರಿನ್ ವಿರುದ್ಧ ಸೋತಿದ್ದರು.