ಪ್ಯಾರಿಸ್:ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಕಠಿಣ ಹೋರಾಟದ ನಂತರ ಎರಡನೇ ಶ್ರೇಯಾಂಕಿತ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಉಗೊ ಹಂಬರ್ಟ್ ಪರಾಭವಗೊಳಿಸಿದರು.
34 ನೇ ಶ್ರೇಯಾಂಕದ ಫ್ರೆಂಚ್ ಯುವ ಆಟಗಾರ ತನ್ನ ವೃತ್ತಿಜೀವನದ ಅತಿದೊಡ್ಡ ಗೆಲುವು ಅಂದರೆ 7-6 (4), 6-7 (6), 7-6 (3) ಮೂಲಕ ಜಯಗಳಿಸಿದರು. ಮೂರು ವರ್ಷಗಳ ಹಿಂದೆ ಹಂಬರ್ಟ್ ಅಗ್ರ 700ರ ಹೊರಗಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ 22 ವರ್ಷದ ಹಂಬರ್ಟ್ ನಾನು ತುಂಬಾ ಸಂತೋಷವಾಗಿದ್ದೇನೆ. ನನ್ನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಸಿಟ್ಸಿಪಾಸ್ ವಿರುದ್ಧದ ಈ ಪಂದ್ಯವನ್ನು ಗೆಲ್ಲಲು ನಾನು ಮಾನಸಿಕವಾಗಿ ಸಿದ್ದನಾಗಿದ್ದೇನೆ ಎಂದಿದ್ದಾರೆ.
ಸೆಪ್ಟೆಂಬರ್‌ನಲ್ಲಿ ನಡೆದ ಹ್ಯಾಂಬರ್ಗ್ ಓಪನ್‌ನಲ್ಲಿ ಐದನೇ ಶ್ರೇಯಾಂಕದ ಡೇನಿಲ್ ಮೆಡ್ವೆಡೆವ್ ವಿರುದ್ಧ ಜಯಗಳಿಸಿದ ನಂತರ ಇದು ಹಂಬರ್ಟ್‌ನ ಎರಡನೇ ಟಾಪ್ 10 ಗೆಲುವಾಗಿದೆ. ಹಂಬರ್ಟ್ ತನ್ನ ಮುಂದಿನ ಪಂದ್ಯದಲ್ಲಿ ಮರಿನ್ ಸಿಲಿಕ್ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ ಮೂರು ಬಾರಿ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ಸ್ಟಾನ್ ವಾವ್ರಿಂಕಾ 6-3, 7-6 (3) ಸೆಟ್‌ಗಳಿಂದ ಡೇನಿಯಲ್ ಇವಾನ್ಸ್ ಅವರನ್ನು ಸೋಲಿಸಿ ಮೂಲಕ ಎರಡನೇ ಸುತ್ತಿಗೆ ಮುನ್ನಡೆ ಪಡೆದರು. 12 ನೇ ಶ್ರೇಯಾಂಕಿತ ವಾವ್ರಿಂಕಾ ಟೂರ್ನಿಯಲ್ಲಿ ಜಯಗಳಿಸಿ ಮುನ್ನಡೆದಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ನಾರ್ಬರ್ಟ್ ಗೊಂಬೋಸ್ 8 ನೇ ಶ್ರೇಯಾಂಕದ ಡೇವಿಡ್ ಗೋಫಿನ್ ಅವರನ್ನು 6-4, 7-6 (6) ಸೆಟ್‌ಗಳಿಂದ ಮಣಿಸಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.