ಮಿಯಾಮಿ: ರೋಜರ್ ಫೆಡರರ್, ನಡಾಲ್ ಮತ್ತು ಜೋಕೊವಿಕ್ ಭಾಗವಹಿಸಿದ ಮಿಯಾಮಿ ಓಪನ್ನಲ್ಲಿ ಪೋಲೆಂಡ್ನ ಯುವ ಆಟಗಾರ ಹರ್ಬಟ್ ಹಕಾಕ್ಜ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
24 ವರ್ಷದ ಹಕಾಕ್ಜ್ ಫೈನಲ್ನಲ್ಲಿ 19 ವರ್ಷದ ಇಟಲಿಯ ಜನ್ನಿಕ್ ಸಿನ್ನರ್ರನ್ನು 7-6(4), 6-4ರ ನೇರ ಸೆಟ್ಗಳಲ್ಲಿ ಭಾನುವಾರ ಮಣಿಸಿ ಚಾಂಪಿಯನ್ ಪಟ್ಟ ಪಡೆದಿದ್ದಾರೆ.
ಈ ವರ್ಷ ಹಕಾಕ್ಜ್ ಆಡಿರುವ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರಸ್ತುತ 37ನೇ ಶ್ರೇಯಾಂಕದಲ್ಲಿರುವ ಅವರು ಮುಂದಿನ ವಾರ ಬಿಡುಗಡೆಯಾಗಲಿರುವ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ 16ನೇ ಸ್ಥಾನಕ್ಕೇರಲಿದ್ದಾರೆ.
-
A moment he'll never forget 🙌
— ATP Tour (@atptour) April 4, 2021 " class="align-text-top noRightClick twitterSection" data="
🎥: @TennisTV | @MiamiOpen | @HubertHurkacz pic.twitter.com/X0EvUmSNLI
">A moment he'll never forget 🙌
— ATP Tour (@atptour) April 4, 2021
🎥: @TennisTV | @MiamiOpen | @HubertHurkacz pic.twitter.com/X0EvUmSNLIA moment he'll never forget 🙌
— ATP Tour (@atptour) April 4, 2021
🎥: @TennisTV | @MiamiOpen | @HubertHurkacz pic.twitter.com/X0EvUmSNLI
ಮಹಿಳೆಯರಲ್ಲಿ ನಂಬರ್ 1 ಆಶ್ಲೇ ಬಾರ್ಟಿ ಚಾಂಪಿಯನ್
ಮಹಿಳೆಯರ ವಿಭಾಗದಲ್ಲಿ ಶನಿವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಡಬ್ಲ್ಯೂಟಿಎ ಶ್ರೇಯಾಂಕದಲ್ಲಿ ಅಗ್ರಶ್ರೇಯಾಂಕದಲ್ಲಿರುವ ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಚಾಂಪಿಯನ್ ಆಗಿದ್ದಾರೆ. ಫೈನಲ್ ಪಂದ್ಯದಲ್ಲಿ ಬಾರ್ಟಿ 6-3, 4-0ಯಲ್ಲಿ ಮುನ್ನಡೆ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಎದುರಾಳಿ ಆ್ಯಂಡ್ರಿಸ್ಕು ಹಿಂದೆ ಸರಿದಿದ್ದರಿಂದ ಬಾರ್ಟಿ ಸುಲಭವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದರು.