ಪ್ಯಾರಿಸ್: ಗಾಯದ ಕಾರಣ 2020ರ ಆಸ್ಟ್ರೇಲಿಯಾ ಓಪನ್ ನಂತರ ಟೆನಿಸ್ ಅಂಗಳದಿಂದ ದೂರ ಉಳಿದಿದ್ದ 20 ಗ್ರ್ಯಾಂಡ್ಸ್ಲಾಮ್ ವಿಜೇತ ರೋಜರ್ ಫೆಡರರ್ ಸೋಮವಾರ ಫ್ರೆಂಚ್ ಓಪನ್ನಲ್ಲಿ ಶುಭಾರಂಭಮಾಡಿದ್ದಾರೆ.
ಬರೋಬ್ಬರಿ 487 ದಿನಗಳ ಬಳಿಕ ಮೇಜರ್ ಟೂರ್ನಿಯಲ್ಲಿ ಆಡಿದ ಫೆಡರರ್ ಮೊದಲ ಸುತ್ತಿನ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಕ್ವಾಲಿಫೈಯರ್ ಡೇನಿಸ್ ಇಸ್ಟೊಮಿನ್ ವಿರುದ್ಧ 6-2, 6-4, 6-3ರ ಸೆಟ್ಗಳ ಅಂತರದಲ್ಲಿ ಸುಲಭ ಜಯ ಸಾಧಿಸಿದರು.
39 ವರ್ಷದ 8ನೇ ಶ್ರೇಯಾಂಕದ ಸ್ಟಾರ್ ಕೊನೆಯ ಬಾರಿ 2020ರ ಆಸ್ಟ್ರೇಲಿಯಾ ಓಪನ್ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಸರ್ಜರಿಗೆ ಒಳಗಾಗಿದ್ದ ಅವರು ಕಳೆದ ವಾರ ಟೆನಿಸ್ಗೆ ಮರಳಿದ್ದರು. ಇಂದು ಗ್ರ್ಯಾಂಡ್ಸ್ಲಾಮ್ನಲ್ಲೂ ಒಂದು ಸರ್ವ್ ಕಳೆದುಕೊಳ್ಳದೆ ಗೆಲುವು ಸಾಧಿಸಿದ್ದಾರೆ.
21ನೇ ಗ್ರ್ಯಾಂಡ್ ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸ್ವಿಸ್ ಆಟಗಾರ ಮುಂದಿನ ಸುತ್ತಿನಲ್ಲಿ 2014ರ ಯುಎಸ್ ಓಪನ್ ಚಾಂಪಿಯನ್ ಕ್ರೊವೆಸಿಯಾದ ಮರಿನ್ ಸಿಲಿಕ್ ಸವಾಲನ್ನು ಎದುರಿಸಲಿದ್ದಾರೆ.
ಇನ್ನು ಇತರೆ ಪಂದ್ಯಗಳಲ್ಲಿ 2ನೇ ಶ್ರೇಯಾಂಕದ ಡೇನಿಲ್ ಮಡ್ವೆಡೆವ್ ಕಜಕಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ 6-3, 6-3, 7-5ರಲ್ಲಿ ಗೆಲುವು ಸಾಧಿಸಿದರು. ಇದು ಅವರ ವೃತ್ತಿ ಜೀವನದ ಮೊದಲ ರೋಲ್ಯಾಂಡ್ ಗ್ಯಾರೋಸ್ ಗೆಲುವಾಗಿದೆ.
ಇದನ್ನು ಓದಿ:ಏಷ್ಯನ್ ಚಾಂಪಿಯನ್ಶಿಪ್: ಚಿನ್ನ ಗೆದ್ದ ಸಂಜೀತ್, ಬೆಳ್ಳಿಗೆ ತೃಪ್ತಿಪಟ್ಟ ಪಂಘಲ್