ETV Bharat / sports

ಫ್ರೆಂಚ್ ಓಪನ್‌: 3ನೇ ಸುತ್ತಿಗೆ ಜೋಕೊವಿಕ್; ಫೆಡರರ್-ಆಶ್ಲೆಗ್ ಬಾರ್ಟಿ ಔಟ್

ವಿಶ್ವ ನಂಬರ್‌ 1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಗಾಯದ ಸಮಸ್ಯೆಯಿಂದಾಗಿ ಎರಡನೇ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಮಾಜಿ ವಿಶ್ವ ನಂ. 1 ಕ್ಯಾರೊಲಿನಾ ಪ್ಲಿಸ್ಕೋವಾ ಕೂಡ ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಸುತ್ತಿನಲ್ಲಿ ಆಘಾತ ಎದುರಿಸಿದರು.

French Open
ಫ್ರೆಂಚ್ ಓಪನ್‌
author img

By

Published : Jun 4, 2021, 9:21 AM IST

ಪ್ಯಾರಿಸ್: ಫ್ರೆಂಚ್ ಓಪನ್ ಕ್ಲೇಕೋರ್ಟ್ ಟೆನ್ನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಭರ್ಜರಿ ಜಯ ಗಳಿಸುವ ಮೂಲಕ ವಿಶ್ವ ಅಗ್ರ ಶ್ರೇಯಾಂಕಿತ ಆಟಗಾರ ನೊವಾಕ್ ಜೋಕೊವಿಕ್ ಮತ್ತು ಸ್ವಿಸ್ ದಿಗ್ಗಜ ರೋಜರ್ ಫೆಡರರ್ 3ನೇ ಸುತ್ತಿಗೇರಿದ್ದಾರೆ.

  • Touchée au dos, la n°1 mondiale Ashleigh Barty a abandonné au deuxième tour. #RolandGarros

    — Roland-Garros (@rolandgarros) June 3, 2021 " class="align-text-top noRightClick twitterSection" data=" ">

ಇನ್ನು, ವಿಶ್ವ ನಂ. 1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಗಾಯದ ಸಮಸ್ಯೆಯಿಂದಾಗಿ ಎರಡನೇ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಾಜಿ ವಿಶ್ವ ನಂ. 1 ಕ್ಯಾರೊಲಿನಾ ಪ್ಲಿಸ್ಕೋವಾ ಕೂಡ ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಸುತ್ತಿನಲ್ಲಿ ಆಘಾತ ಎದುರಿಸಿದರು. 5ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ, 4ನೇ ಶ್ರೇಯಾಂಕಿತೆ ಅಮೆರಿಕದ ಸೋಫಿಯಾ ಕೆನಿನ್ ಮೂರನೇ ಸುತ್ತಿಗೇರಿದ್ದಾರೆ. ಪುರುಷರ ವಿಭಾಗದಲ್ಲಿ ವಿಶ್ವ ನಂ. 2 ಆಟಗಾರ ಡೆನಿಲ್ ಮೆಡ್ವೆಡೇವ್ ಮುನ್ನಡೆ ಕಂಡಿದ್ದಾರೆ.

25 ವರ್ಷದ ಬಾರ್ಟಿ ಪೋಲೆಂಡ್‌ನ ಮಗ್ದ ಲಿನೆಟ್ ವಿರುದ್ಧ ಮೊದಲ ಸೆಟ್‌ನಲ್ಲಿ 1-6ರಿಂದ ಸೋತು, 2ನೇ ಸೆಟ್‌ನಲ್ಲಿ 2-2 ಸಮಬಲದಲ್ಲಿದ್ದಾಗ ಸೊಂಟ ನೋವಿನಿಂದ ಬಳಲಿ ಪಂದ್ಯದಿಂದ ನಿವೃತ್ತಿ ಹೊಂದಿದರು. 2019ರ ಚಾಂಪಿಯನ್ ಬಾರ್ಟಿ ಮೊದಲ ಸೆಟ್‌ನಲ್ಲೂ ಗಾಯದ ನಡುವೆ ಹೋರಾಡಿದ್ದರು. ಬಾರ್ಟಿ ನಿರ್ಗಮನದಿಂದ ಟೂರ್ನಿಯಲ್ಲಿ ಈಗ ವಿಶ್ವದ ಅಗ್ರ 3 ಆಟಗಾರ್ತಿಯರಿಲ್ಲದಂತಾಗಿದೆ. ನಂ. 2 ನವೊಮಿ ಒಸಾಕ ಸುದ್ದಿಗೋಷ್ಠಿ ವಿವಾದದಿಂದ ಹೊರನಡೆದಿದ್ದರೆ, ನಂ. 3 ಸಿಮೋನಾ ಹಲೆಪ್ ಗಾಯದಿಂದಾಗಿ ಟೂರ್ನಿ ಆರಂಭಕ್ಕೂ ಮೊದಲೇ ಹೊರಬಿದ್ದಿದ್ದರು. 9ನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಪ್ಲಿಸ್ಕೋವಾ 5-7, 1-6ರಿಂದ ಅಮೆರಿಕದ ಸ್ಲೋವನ್ ಸ್ಟೀಫನ್ಸ್ ವಿರುದ್ಧ ಸೋಲುಂಡರು.

ಜೋಕೋ, ಫೆಡರರ್ ಮುನ್ನಡೆ:

ವಿಶ್ವ ನಂ. 1 ಆಟಗಾರ ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ 2ನೇ ಸುತ್ತಿನಲ್ಲಿ ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್ ವಿರುದ್ಧ 6-3, 6-2, 6-4 ನೇರ ಸೆಟ್‌ಗಳಿಂದ ಜಯ ಸಾಧಿಸಿದರು. 20 ಗ್ರಾಂಡ್ ಸ್ಲಾಂಗಳ ಒಡೆಯ ಫೆಡರರ್ ಕ್ರೊವೇಷಿಯಾದ ಮರಿನ್ ಸಿಲಿಕ್ ವಿರುದ್ಧ ಸ್ವಲ್ಪ ಪ್ರತಿರೋಧ ಎದುರಿಸಿ 6-2, 2-6, 7-6, 6-2 ರಿಂದ ಗೆದ್ದರು.

ಬೋಪಣ್ಣ ಮುನ್ನಡೆ:

ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊವೇಷಿಯಾದ ಫ್ರಾಂಕೊ ಸ್ಕುಗರ್ ಪುರುಷರ ಡಬಲ್ಸ್ ವಿಭಾಗದಲ್ಲಿ 3ನೇ ಸುತ್ತಿಗೇರಿದ್ದಾರೆ. ಬೋಪಣ್ಣ ಜೋಡಿ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಮೊನ್ರೋ-ಟಿಯಾೊಯಿ ಜೋಡಿಗೆ 6-4, 7-5 ನೇರ ಸೆಟ್‌ಗಳಿಂದ ಸೋಲುಣಿಸಿತು. ಭಾರತದ ಮತ್ತೋರ್ವ ಆಟಗಾರ ದಿವಿಜ್ ಶರಣ್ ಅರ್ಜೆಂಟೀನಾದ ಜತೆಗಾರ ಫೆಡೆರಿಕೊ ಡೆಲ್ಬೊನಿಸ್ ಅವರೊಂದಿಗೆ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.