ETV Bharat / sports

ಎಟಿಪಿ ಫೈನಲ್​​ನಲ್ಲಿ ಮುಗ್ಗರಿಸಿದ ನಡಾಲ್​: ಆಸ್ಟ್ರಿಯಾದ ಡೊನಮಿಕ್ ಥೀಮ್​​ಗೆ ಗೆಲುವು - ಎಟಿಪಿ ಟೆನಿಸ್ ಟೂರ್ನಿಯ

ಎಟಿಪಿ ಟೆನಿಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ನಿರಾಯಾಸವಾಗಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದ್ದ ನಡಾಲ್ ಅಮೆರಿಕ ಓಪನ್ ಟೆನಿಸ್ ವಿನ್ನರ್ ಡೊನಮಿಕ್ ಥೀಮ್​ ವಿರುದ್ಧ ಸೋಲೊಪ್ಪಿಕೊಂಡಿದ್ದು, ಥೀಮ್ ಎಟಿಪಿ ಟೂರ್​​ನಲ್ಲಿ ಮತ್ತೊಂದು ಜಯ ದಾಖಲಿಸಿದ್ದಾರೆ.

Dominic Thiem defeats Rafael Nadal at ATP Finals
ಎಟಿಪಿ ಫೈನಲ್​​ನಲ್ಲಿ ಮುಗ್ಗರಿಸಿದ ನಡಾಲ್​
author img

By

Published : Nov 18, 2020, 11:38 AM IST

Updated : Nov 20, 2020, 9:37 AM IST

ಲಂಡನ್​: ಎಟಿಪಿ ಟೆನಿಸ್ ಟೂರ್ನಿಯ ಫೈನಲ್ಸ್​​ನ ಗ್ರೂಪ್ ಪಂದ್ಯದಲ್ಲಿ ವಿಶ್ವ ದಿಗ್ಗಜ ಆಟಗಾರ ರಾಫೆಲ್ ನಡಾಲ್​ ವಿರುದ್ಧ ಡೊನಮಿಕ್ ಥೀಮ್ ಭರ್ಜರಿ ಜಯದಾಖಲಿಸಿದ್ದಾರೆ.

ರಾಫೆಲ್ ವಿರುದ್ಧ 6-7 (7), 7-6(4) ಸೆಟ್​​​​ಗಳಿಂದ ಜಯ ದಾಖಲಿಸಿದ್ದಾರೆ. ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರನಾಗಿದ್ದ ಡೊನಮಿಕ್ ಇದೀಗ ನಡಾಲ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಮೊದಲ ಸೆಟ್​​ನಲ್ಲಿ ಟೈ ಬ್ರೇಕರ್​​​​​​​​​​ನಲ್ಲಿ ಎರಡು ಸೆಟ್ ಪಾಯಿಂಟ್ ಗಳಿಸಿ, ಬಳಿಕ 72 ನಿಮಿಷದಲ್ಲಿ ಎರಡನೇ ಸೆಟ್​​​ನಲ್ಲಿ ಗೆಲುವು ದಾಖಲಿಸಿದ್ದಾರೆ.

ಗ್ರೂಪ್ ಲಂಡನ್​​ 2020ಯಲ್ಲಿ ರೌಂಡ್ ರಾಬಿನ್ ವಿಭಾಗದಲ್ಲಿ ಥೀಮ್ ಈಗ 2-0 ಸ್ಥಾನದಲ್ಲಿದ್ದರೆ, ಸತತವಾಗಿ ಎರಡನೇ ವರ್ಷ ಸೆಮಿಫೈನಲ್ ತಲುಪಿ ತಮ್ಮ ಆಟವನ್ನು ಸುಧಾರಿಸಿಕೊಂಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಥೀಮ್​ 'ಈ ಪಂದ್ಯವು ರೀತಿಯಿಂದಲೂ ಅತ್ಯಂತ ಕಷ್ಟಕರವಾಗಿತ್ತು. ನಾನು ಮಾಡಿದ ಸರ್ವ್​ಗಳು ಹೆಚ್ಚು ನಿಖರವಾಗಿದ್ದವು, ಮತ್ತು ನನಗೆ ಆ ಬಗ್ಗೆ ಸಂತಸವಿದೆ. ನಾನು ಪಂದ್ಯದ ಮೊದಲ ಸರ್ವ್ ಪಡೆದಾಗ ಉತ್ತಮ ಆರಂಭ ಪಡೆಯುವ ವಿಶ್ವಾಸವಿತ್ತು ಹಾಗೂ ಅದನ್ನೇ ಮುಂದುವರಿಸಿದೆ’ ಎಂದಿದ್ದಾರೆ.

ಮೊದಲ ಸೆಟ್​ ಟೈ ಆದಾಗ ನಾನು ತುಂಬಾನೇ ಕಷ್ಟದಲ್ಲಿದ್ದೆ. ಆಗ ನನಗೆ ಸರ್ವ್​​ಗಳು ಸಹಾಯ ಮಾಡಿದವು. ಇದು ಒಳಾಂಗಣ ಟೆನಿಸ್​​​ನಲ್ಲಿ ಉತ್ತಮ ಹೊಡೆತ ಎಂದು ನಾನು ಭಾವಿಸಿದ್ದೇನೆ ಎಂದರು.

Last Updated : Nov 20, 2020, 9:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.