ETV Bharat / sports

ಆ್ಯಂಡ್ರಿಯಾ ಟೂರ್​: ಕ್ರಜಿನೋವಿಕ್ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದ ಡೊಮಿನಿಕ್​ ಥೀಮ್​

ಥೀಮ್​ 4-3(7-2),2-4, 4-2 ರಲ್ಲಿ ಸರ್ಬನಿಯನ್​ ಟೆನ್ನಿಸ್​ ಆಟಗಾರರನ್ನು ಬಗ್ಗುಬಡಿದಿದ್ದಾರೆ. ಭಾನುವಾರ ನಡೆದ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಥೀಮ್​ ಮೊಲ ಸೆಟ್​ನಲ್ಲಿ ಕ್ರಜಿನೋವಿಕ್​ ಅವರೊಂದಿಗೆ ಕಠಿಣ ಪೈಪೋಟಿ ಎದುರಿಸಿದ್ದರು. ಆದರೆ ಟೈಬ್ರೇಕ್​ನಲ್ಲಿ ಸೆಟ್​ ಗೆಲ್ಲುಕೊಳ್ಳುವಲ್ಲಿ ಯಶಸ್ವಿಯಾದರು.

ಡೊಮಿನಿಕ್​ ಥೀಮ್​
ಡೊಮಿನಿಕ್​ ಥೀಮ್​
author img

By

Published : Jun 15, 2020, 12:28 PM IST

ಬೆಲ್​ಗ್ರೇಡ್​: ಸರ್ಬಿಯಾದಲ್ಲಿ ನಡೆದ ವಿಶ್ವದ 3ನೇ ಶ್ರೇಯಾಂಕದ ಆಸ್ಟ್ರೀಯನ್​ ಟೆನ್ನಿಸಿಗ ಡೊಮೆನಿಕ್​ ಥೀಮ್​ ಸರ್ಬಿಯಾದ ಫಿಲಿಪ್​ ಕ್ರಜಿನೋವಿಕ್​ರನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

ಥೀಮ್​ 4-3(7-2),2-4, 4-2 ರಲ್ಲಿ ಸರ್ಬನಿಯನ್​ ಟೆನ್ನಿಸ್​ ಆಟಗಾರರನ್ನು ಬಗ್ಗುಬಡಿದಿದ್ದಾರೆ. ಭಾನುವಾರ ನಡೆದ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಥೀಮ್​ ಮೊಲ ಸೆಟ್​ನಲ್ಲಿ ಕ್ರಜಿನೋವಿಕ್​ ಅವರೊಂದಿಗೆ ಕಠಿಣ ಪೈಪೋಟಿ ಎದುರಿಸಿದ್ದರು. ಆದರೆ ಟೈಬ್ರೇಕ್​ನಲ್ಲಿ ಸೆಟ್​ ಗೆಲ್ಲುಕೊಳ್ಳುವಲ್ಲಿ ಯಶಸ್ವಿಯಾದರು.

ಪ್ರಸ್ತುತ ವಿಶ್ವದ 32 ನೇ ಸ್ಥಾನದಲ್ಲಿರುವ ಕ್ರಜಿನೋವಿಕ್, ಎರಡನೇ ಸೆಟ್​ನಲ್ಲಿ ತಿರುಗಿ ಬಿದ್ದು, 3-1ರ ಹಿನ್ನಡೆಯೊಂದಿಗೂ 4-2ರಲ್ಲಿ ಸೆಟ್​ ಗೆಲ್ಲುವಲ್ಲಿ ಯಶಸ್ವಿಯಾದರು. ಆದರೆ ಮೂರನೇ ಸೆಟ್​ನಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರ ವಿರುದ್ಧ 2-4ರಲ್ಲಿ ಸೋಲುವ ಮೂಲಕ ರನ್ನರ್​ ಆಪ್​ಗೆ ತೃಪ್ತಿಪಟ್ಟಿದ್ದಾರೆ.

ಅಗ್ರಕ್ರಮಾಂಕದ ಟೆನ್ನಿಸ್​ ಆಟಗಾರ ನೂವಾಕ್ ಜೊಕೊವಿಕ್​ ಅವರ ಸಂಘಟನೆ ಈ ಪ್ರಾದೇಶಿಕ ಚಾರಿಟಿ ಟೆನ್ನಿಸ್​ ಟೂರ್ನಮೆಂಟ್​ಅನ್ನು ಜೂನ್​ 13-14 ರಂದು ಆಯೋಜಿಸಿತ್ತು.

ನೊವಾಕ್​ ಜೊಕೊವಿಕ್​ ಭಾನುವಾರ ಕ್ರಜಿನೋವಿಕ್ ವಿರುದ್ಧ 2-4, 4-2, 4-1 ಸೋಲು ಕಂಡಿದ್ದರು. ಆದರೂ ಗುಂಪಿನಲ್ಲಿ ಎರಡನೇಯವರಾಗಿ ಸ್ಥಾನಪಡೆದುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.