ನೂರ್ ಸುಲ್ತಾನ್ (ಕಜಾಕಿಸ್ತಾನ): ಶುಕ್ರವಾರ ಎರಡು ಸಿಂಗಲ್ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತೀಯ ಆಟಗಾರರು ಇಂದು ಡಬಲ್ಸ್ನಲ್ಲೂ ಜಯ ಸಾಧಿಸಿ ಮುನ್ನಡೆಯನ್ನು 3-0ಗೆ ಏರಿಸಿಕೊಂಡಿದ್ದಾರೆ.
ಹಿರಿಯ ಆಟಗಾರ ಲಿಯಾಂಡರ್ ಪೇಸ್ ಇಂದೇ ಡೇವಿಸ್ ಕಪ್ಗೆ ಪದಾರ್ಪಣೆ ಮಾಡಿದ ಎನ್. ಜೀವನ್ ಜೊತೆಗೂಡಿ ಪಾಕಿಸ್ತಾನದ ಮೊಹಮ್ಮದ್ ಶೋಯಬ್ ಮತ್ತು ಅಬ್ಧುಲ್ ರೆಹಮಾನ್ ಅವರನ್ನು 6-1, 6-3 ರಲ್ಲಿ ಮಣಿಸಿದರು.
53 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಪೇಸ್ ಜೋಡಿ ಪಾಕ್ ವಿರುದ್ಧ ಪ್ರಾಬಲ್ಯ ಸಾಧಿಸಿ ಎರಡೂ ಸೆಟ್ಗಳನ್ನು ಸುಲಭವಾಗಿ ಗೆಲುವು ಸಾಧಿಸಿತು.
ಲಿಯಾಂಡರ್ ಪೇಸ್ ಕಳೆದ ವರ್ಷ 43 ನೇ ಜಯ ಸಾಧಿಸಿ ಡೇವಿಸ್ ಕಪ್ ಇತಿಹಾಸದಲ್ಲಿ ಡಬಲ್ಸ್ನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ವಿಶ್ವದಾಖಲೆಯನ್ನಯ ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ತಮ್ಮ ಗೆಲುವಿನ ಓಟವನ್ನು 44ಕ್ಕೇರಿಸಿಕೊಂಡಿದ್ದಾರೆ.
ಶುಕ್ರವಾರ ವಿಶ್ವ ನಂ. 176 ರಾಮ್ಕುಮಾರ್ ರಾಮನಾಥನ್ ಹಾಗೂ ವಿಶ್ವ ನಂ. 131 ಸುಮಿತ್ ನಗಾಲ್ ಸಿಂಗಲ್ಸ್ನಲ್ಲಿ ಜಯ ಸಾಧಿಸಿ 2-0ಯಲ್ಲಿ ಮುನ್ನಡೆ ಸಾಧಿಸಿದ್ದರು.