ಮೆಲ್ಬೋರ್ನ್: ರಷ್ಯಾದ ಸ್ಟಾರ್ ಡೇನಿಲ್ ಮೆಡ್ವೆಡೆವ್ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ತಮ್ಮದೇ ದೇಶದ ಆ್ಯಂಡ್ರೆ ರುಬ್ಲೆವ್ರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ರಷ್ಯನ್ನರ ಕಾದಾಟದಲ್ಲಿ 4ನೇ ಶ್ರೇಯಾಂಕದ ಮೆಡ್ವೆಡೆವ್ 7ನೇ ಶ್ರೇಯಾಂಕದ ರುಬೆಲ್ ವಿರುದ್ಧ 7-5,6-3, 6-2ರ ನೇರ ಸೆಟ್ಗಳಲ್ಲಿ ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದರು.
ಅಲ್ಲದೇ ಕಳೆದ ನವ ನವೆಂಬರ್ನಿಂದ ಸತತ 19ನೇ ಗೆಲುವು ಸಾಧಿಸಿದರು. ಅವರು ಈ ಮಧ್ಯೆ ಪ್ಯಾರೀಸ್ 1000, ಎಟಿಪಿ ಫೈನಲ್ಸ್ ಮತ್ತು ಎಟಿಪಿ ಕಪ್ ಗಳನ್ನು ಗೆದ್ದಿದ್ದಲ್ಲದೇ, ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ವರೆಗೆ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದ್ದಾರೆ.
2019ರ ಯುಎಸ್ ಓಪನ್ ಫೈನಲ್ ಮತ್ತು 2020ರ ಯುಎಸ್ ಸೆಮಿಫೈನಲ್ ಹೊರೆತುಪಡಿಸಿದರೆ, ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ನಲ್ಲಿ ಉಪಾಂತ್ಯಕ್ಕೆ ಪ್ರವೇಶಿಸಿದ್ದಾರೆ.
ಮೆಡ್ವೆಡೆವ್ಸೆಮಿಫೈನಲ್ನಲ್ಲಿ ಸ್ಟೆಫಾನೋಸ್ ಸಿಟ್ಸಿಪಾಸ್ ಮತ್ತು ನಡಾಲ್ ನಡುವಿನ ಕ್ವಾರ್ಟರ್ ಫೈನಲ್ನಲ್ಲಿ ಗೆದ್ದವರ ವಿರುದ್ಧ ಶುಕ್ರವಾರ ಸೆಣಸಾಡಲಿದ್ದಾರೆ.
ಇದನ್ನು ಓದಿ:ಆಸ್ಟ್ರೇಲಿಯನ್ ಓಪನ್ 2021: ವಿಶ್ವದ ನಂಬರ್ 1 ಆಶ್ಲೇ ಬಾರ್ಟಿಗೆ ಸೋಲುಣಿಸಿದ ಮುಚೋವಾ